ADVERTISEMENT

ಪಶು ವೈದ್ಯಕೀಯ ವಿಜ್ಞಾನಗಳ ವಿ.ವಿ ಘಟಿಕೋತ್ಸವ: 113 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 10:10 IST
Last Updated 17 ಜನವರಿ 2020, 10:10 IST
ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಕುಲಪತಿ ಡಾ.ಎಚ್.ಡಿ.ನಾರಾಯಣ ಸ್ವಾಮಿ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು.
ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಕುಲಪತಿ ಡಾ.ಎಚ್.ಡಿ.ನಾರಾಯಣ ಸ್ವಾಮಿ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು.   

ಬೀದರ್‌: ‘ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 17ರಂದು ಮಧ್ಯಾಹ್ನ ನಡೆಯಲಿರುವ ವಿಶ್ವವಿದ್ಯಾಲಯದ ಹನ್ನೊಂದನೆಯ ಘಟಿಕೋತ್ಸವದಲ್ಲಿ 113 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸೇರಿ ಒಟ್ಟು 821 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ ತಿಳಿಸಿದರು.

‘ಘಟಿಕೋತ್ಸವದಲ್ಲಿ 662 ಸ್ನಾತಕ, 122 ಸ್ನಾತಕೋತ್ತರ ಪದವೀಧರರು ಹಾಗೂ 37 ಡಾಕ್ಟರೇಟ್ ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು’ ಎಂದು ವಿಶ್ವವಿದ್ಯಾಲಯದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘2017–2018ನೇ ಸಾಲಿನ 69 ಹಾಗೂ 2018–2019ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ 44 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

2017–2018ರ ಸ್ನಾತಕ ಪದವಿ:ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿಶ್ವಾಸ್ ಕೆ.ಎಂ. 10 ಚಿನ್ನದ ಪದಕ, ಬೀದರ್‌ನ ಪಶು ವೈದ್ಯಕೀಯ ಮಹಾವಿದ್ಯಾಲಯದ ಶಿವಾನಿ ಮಾಮಾನೆ 5 ಹಾಗೂ ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ವರುಣ ಶಾಸ್ತ್ರಿ 4 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ.

ಬೆಂಗಳೂರಿನ ರಾಕೇಶ ಚೌರಡ್ಡಿ, ಶಿವಮೊಗ್ಗದ ನಿತೀಶ ಅರುಣ ಕುಲಕರ್ಣಿ, ಹಾಸನದ ರೂಪಾ ಎನ್. ತಲಾ 2 ಚಿನ್ನದ ಪದಗಳನ್ನು ಪಡೆದುಕೊಳ್ಳುವರು. ಬೀದರ್‌ನ ರಜತ್ ಸಾಗರೆ ಹಾಗೂ ಚಿರಂತ್ ಜೆ.ಪಿ. ತಲಾ ಒಂದು ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ.

ಬೆಂಗಳೂರಿನ ಹೈನು ವಿಜ್ಞಾನ ಮಹಾವಿದ್ಯಾಲಯದ ಶ್ರೀನಿಧಿ ಜಿ. 5, ಕಲಬುರ್ಗಿಯ ಹೈನು ವಿಜ್ಞಾನ ಮಹಾವಿದ್ಯಾಲಯದ ಮನು ಟಿ.ವಿ. 1 ಚಿನ್ನದ ಪದಕ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಧೀರಜ್ ಎಸ್.ಬಿ 3 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹಾಸನದ ವರುಣ ಶಾಸ್ತ್ರಿ ಹಾಗೂ ಬೆಂಗಳೂರಿನ ಶ್ರದ್ಧಾ ಖಾರ್ವಿ ತಲಾ ಒಂದು ಚಿನ್ನದ ಪದಕಕ್ಕೆ ಭಾಜನರಾಗಲಿದ್ದಾರೆ.

ಸ್ನಾತಕೋತ್ತರ ಪದವಿ:ಪಶು ವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ವಿಕಿರಣಶಾಸ್ತ್ರದಲ್ಲಿ ಬೀದರ್‌ನ ಸಚಿನ್ ಎನ್. ಹಾಗೂ ಕುಕ್ಕುಟಶಾಸ್ತ್ರದಲ್ಲಿ ಬೆಂಗಳೂರಿನ ಇಮ್ರಾನ್ ಎನ್.ಕೆ. ತಲಾ 3 ಚಿನ್ನದ ಪದಕ, ಪಶು ವೈದ್ಯಕೀಯ ಸೂಕ್ಷ್ಮಾಣು ಜೀವಶಾಸ್ತ್ರದಲ್ಲಿ ಸೂರ್ಯಕಾಂತ ಹಾಗೂ ಪಶು ವೈದ್ಯಕೀಯ ರೋಗಶಾಸ್ತ್ರದಲ್ಲಿ ಜೀವನ್‌ ಕೆ. ತಲಾ 2 ಚಿನ್ನದ ಪದಕ ಪಡೆಯಲಿದ್ದಾರೆ.

ಪಶು ವೈದ್ಯಕೀಯ ಚಿಕಿತ್ಸಾಶಾಸ್ತ್ರದಲ್ಲಿ ಬಸವರಾಜ, ಪಶು ವೈದ್ಯಕೀಯ ಪರಾವಲಂಬಿ ಜೀವಶಾಸ್ತ್ರದಲ್ಲಿ ಶಕುಂತಲಾ ಕಾಗೆ, ಜಾನುವಾರು ಉತ್ಪನ್ನಗಳ ತಂತ್ರಜ್ಞಾನದಲ್ಲಿ ರಾಜೇಶ ಎಸ್., ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ವೇಣು ಆರ್., ಪ್ರಾಣಿ ಆಹಾರಶಾಸ್ತ್ರದಲ್ಲಿ ಅರುಣ್ ಪಿ. ನಾಥ್, ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ ವಿಸ್ತರಣಾ ಶಿಕ್ಷಣದಲ್ಲಿ ಶಿವಮೊಗ್ಗದ ಸುಧಾರಾಣಿ ಜಿ., ಪಶು ವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರದಲ್ಲಿ ಪ್ರಕಾಶ್ ವಿ.ಸೋಗಲನ್ನವರ್ ತಲಾ ಒಂದು ಚಿನ್ನದ ಪದಕ ಸ್ವೀಕರಿಸುವರು.

ಹೈನು ವಿಜ್ಞಾನದಲ್ಲಿ ಬೆಂಗಳೂರಿನ ಹೈನು ವಿಜ್ಞಾನ ಮಹಾವಿದ್ಯಾಲಯದ ಎಲಿಝಬೆತ್ ಥಾಮಸ್ ಒಂದು ಚಿನ್ನದ ಪದಕ ಪಡೆಯಲಿದ್ದಾರೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಗುಂಡುಬಿಲ್ಲಿ ದೇವಿಕಾ ಮೀನು ಸಂಸ್ಕರಣಾ ತಂತ್ರಜ್ಞಾನದಲ್ಲಿ 2 ಚಿನ್ನದ ಪದಕ, ಮೀನುಗಾರಿಕೆ ಸಂಪನ್ಮೂಲ ನಿರ್ವಹಣೆಯಲ್ಲಿ ರಾಧಿಕಾ ಬಾಲಚಂದ್ರನ್ ಹಾಗೂ ಜಲಚರ ಸಾಕಣೆಯಲ್ಲಿ ಆದ್ರಾ ಎಂ. ತಲಾ ಒಂದು ಚಿನ್ನದ ಪದಕ ಪಡೆಯುವರು.

ಡಾಕ್ಟರೇಟ್ ಪದವಿ: ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ಎಚ್. ಸಿ. ಇಂದೇಶ್ ಕುಕ್ಕುಟ ವಿಜ್ಞಾನದಲ್ಲಿ 2, ಪಶು ವೈದ್ಯಕೀಯ ಅಂಗರಚನಾ ಶಾಸ್ತ್ರದಲ್ಲಿ ಮಂಜುನಾಥ ಕೆ., ಪ್ರಾಣಿ ಆಹಾರಶಾಸ್ತ್ರದಲ್ಲಿ ಗಿರಿಧರ ಕೆ.ಎಸ್., ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಗುರುಪ್ರಸಾದ ಆರ್., ಪಶು ವೈದ್ಯಕೀಯ ಸೂಕ್ಷ್ಮಾಣುಜೀವಿ ಶಾಸ್ತ್ರದಲ್ಲಿ ಬೀದರಿನ ಮಲ್ಲಿನಾಥ, ಬೆಂಗಳೂರಿನ ಹೈನು ವಿಜ್ಞಾನ ಮಹಾವಿದ್ಯಾಲಯದ ಹರಿಣಿ ವೇಣುಗೋಪಾಲ್ ಹೈನು ತಂತ್ರಜ್ಞಾನದಲ್ಲಿ, ಹೈನು ರಸಾಯನ ಶಾಸ್ತ್ರದಲ್ಲಿ ಪುಷ್ಪಾ ಬಿ.ಪಿ. ಹಾಗೂ ಮೀನುಗಾರಿಕೆ ಸಂಪನ್ಮೂಲ ನಿರ್ವಹಣೆಯಲ್ಲಿ ಮಂಗಳೂರಿನ ದೇವಾನಂದ ಟಿ.ಎನ್. ತಲಾ ಒಂದು ಚಿನ್ನದ ಪದಕ ಸ್ವೀಕರಿಸಲಿದ್ದಾರೆ.

2018-19 ಸಾಲಿನ ಸ್ನಾತಕ ಪದವಿ: ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ಶ್ರುತಿ ವಲ್ಸನ್ 10 ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ. ಬೀದರ್‌ನ ಸಚಿನ್ ಕೆ. ಕೊಂಡಗುಲಿ 6, ಹಾಸನದ ಸಿಂಧೂರಾ ದಿವಾಕರ್ ಮತ್ತು ಶ್ರಾವ್ಯಾ ಬಿ.ಎಲ್. ತಲಾ 4, ಬೆಂಗಳೂರಿನ ಅನುಶ್ರೀ ಟಿ.ಎಸ್ ಮತ್ತು ಶಿವಮೊಗ್ಗದ ವಿನಯ ಎಸ್‌.ಡಿ. ತಲಾ 3 ಚಿನ್ನದ ಪದಕಗಳಿಗೆ ಭಾಜನರಾಗಲಿದ್ದಾರೆ. ಬೆಂಗಳೂರಿನ ಮಣಿಕಂಠ ಸ್ವಾಮಿ 1 ಚಿನ್ನದ ಪದಕ ಪಡೆಯಲಿದ್ದಾರೆ.

ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಶಾಮಿಲಿ ವಿ.ಎಲ್. 3 ಚಿನ್ನದ ಪದಕ, ಹೈನು ತಂತ್ರಜ್ಞಾನದಲ್ಲಿ ಬೆಂಗಳೂರಿನ ಲಿಖಿತ್ ಎಚ್.ಡಿ. 3, ಪ್ರಶಾಂತ ಎಸ್, ಸುಶ್ಮಿತಾ ಎಚ್.ಬಿ. ಮತ್ತು ಕಲಬುರ್ಗಿಯ ಚಂದನಾ ಕೆ.ವಿ. ತಲಾ ಒಂದು ಚಿನ್ನದ ಪದಕ ಸ್ವೀಕರಿಸಲಿದ್ದಾರೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಬೀದರ್‌ನ ವಿದ್ಯಾವರ್ಷಾ ಎಸ್.ಜೆ. ಹಾಗೂ ಹಾಸನದ ಶ್ರಾವ್ಯಾ ಬಿ.ಎಲ್. ಚಿನ್ನದ ಪದಕ ಪಡೆಯಲಿದ್ದಾರೆ.

ಸ್ನಾತಕೋತ್ತರ ಪದವಿ: ಜಲ ಪರಿಸರ ನಿರ್ವಹಣೆ ವಿಷಯದಲ್ಲಿ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ವರದೆಲ್ಲಿ ರಿಶಿಕಾ ಚಿನ್ನದ ಪದಕ ಸ್ವೀಕರಿಸುವರು. ಪಶು ವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರದಲ್ಲಿ ಬೀದರ್‌ನ ವೆಂಕಟಗಿರಿ ಅವರು ಡಾಕ್ಟರೇಟ್‌ ಪದವಿಯೊಂದಿಗೆ ಚಿನ್ನದ ಪದಕ ಪಡೆಯಲಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕ್ಯಾಲೆಂಡರ್ ಮತ್ತು ಡೈರಿಗಳನ್ನು ಬಿಡುಗಡೆ ಮಾಡಲಾಯಿತು. ಕುಲಸಚಿವ ಪ್ರೊ.ಕೆ.ಸಿ.ವೀರಣ್ಣ, ವಿಸ್ತರಣಾ ನಿರ್ದೇಶಕ ಡಾ.ಎನ್.ಎ.ಪಾಟೀಲ, ಹಣಕಾಸು ನಿಯಂತ್ರಣಾಧಿಕಾರಿ ಡಾ.ಸಿ.ವಿ.ರಾಜು, ಸಂಶೋಧನಾ ನಿರ್ದೇಶಕ ಡಾ.ಶಿವಪ್ರಕಾಶ, ಸ್ನಾತಕೋತ್ತರ ಶಿಕ್ಷಣ ನಿರ್ದೇಶಕ ಡಾ.ಎಂ.ಕೆ.ತಾಂಡ್ಲೆ, ಬೀದರ್ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ದಿಲೀಪಕುಮಾರ, ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಡಾ.ಭೈರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.