ADVERTISEMENT

13ರಿಂದ ರಾಷ್ಟ್ರೀಯ ಲೋಕ ನೃತ್ಯ ಭಾರತ-ಭಾರತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:52 IST
Last Updated 3 ಜುಲೈ 2022, 1:52 IST
ರಾಜಕುಮಾರ ಹೆಬ್ಬಾಳೆ
ರಾಜಕುಮಾರ ಹೆಬ್ಬಾಳೆ   

ಬೀದರ್‌: ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ನಾಗಪುರದ ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ ಹಾಗೂ ನವದೆಹಲಿಯ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಆಶ್ರಯದಲ್ಲಿ ಸ್ವಾತಂತ್ರ್ಯದಅಮೃತ ಮಹೋತ್ಸವದ ನಿಮಿತ್ತ ಜುಲೈ 13ರಿಂದ 18ರ ವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರಾಷ್ಟ್ರೀಯ ಲೋಕ ನೃತ್ಯ ಭಾರತ-ಭಾರತಿ ಕಾರ್ಯಕ್ರಮ ನಡೆಯಲಿದೆ.

ಆರು ದಿವಸಗಳ ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ಒಡಿಶಾ, ಪಂಜಾಬ, ಛತ್ತಿಸಗಡ, ಮಹಾರಾಷ್ಟ್ರದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ತಿಳಿಸಿದ್ದಾರೆ.

ಜುಲೈ 13 ರಂದು ಚಿಟಗುಪ್ಪ, 14 ರಂದು ಹುಲಸೂರು, 15 ರಂದು ತೆಲಂಗಾಣದ ಹೊಸಳ್ಳಿ, 16 ರಂದು ಭಾಲ್ಕಿ ಮತ್ತು ಸಂತಪುರ, 17 ರಂದು ತೆಲಂಗಾಣದ ರತ್ನಾಪುರ ಹಾಗೂ 18 ರಂದು ನ್ಯಾಲಕಲ ಮಂಡಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.