ADVERTISEMENT

ಬೀದರ್‌ ಜಿಲ್ಲೆಯಲ್ಲಿ 13,86,955 ಮತದಾರರು

ದೋಷ ರಹಿತ ಮತದಾರರ ಅಂತಿಮ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 15:14 IST
Last Updated 13 ಜನವರಿ 2022, 15:14 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಾತನಾಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಇದ್ದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಾತನಾಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಇದ್ದರು   

ಬೀದರ್: ಜಿಲ್ಲೆಯಲ್ಲಿ ಭಾವಚಿತ್ರ ಇರುವ ಮತದಾರರ ದೋಷ ರಹಿತ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ರಾಜಕೀಯ ಪ್ರತಿನಿಧಿಗಳ ಜತೆಗಿನ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಕಚೇರಿ, ಎಲ್ಲ ಮತಗಟ್ಟೆಗಳ ಸೂಚನಾ ಫಲಕಗಳಲ್ಲಿ ಮತದಾರರ ಅಂತಿಮ ಪಟ್ಟಿ ಲಗತ್ತಿಸಲಾಗಿದೆ ಎಂದು ಹೇಳಿದರು.

ADVERTISEMENT

ಕರಡು ಮತದಾರರ ಪಟ್ಟಿಯ ಕುಂದು ಕೊರತೆಗಳನ್ನು ಗಣನೆಗೆ ತೆಗೆದುಕೊಂಡು, ಪರಿಷ್ಕರಿಸಿ, ಯಾವುದೇ ಲೋಪ ದೋಷಗಳಿಲ್ಲದ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಕ ಮಾಡಬೇಕು ಎಂದು ತಿಳಿದರು.

ಅಂತಿಮ ಮತದಾರರ ಪಟ್ಟಿ ಪ್ರಕಾರ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 1,26,681 ಪುರುಷರು ಹಾಗೂ 1,16,408 ಮಹಿಳೆಯರು ಸೇರಿ ಒಟ್ಟು 2,43,089 ಮತದಾರರು, ಹುಮನಾಬಾದ್‍ನಲ್ಲಿ 1,29,131 ಪುರುಷರು ಹಾಗೂ 1,21,164 ಮಹಿಳೆಯರು ಸೇರಿ ಒಟ್ಟು 2,50,295 ಮತದಾರರು, ಬೀದರ್ ದಕ್ಷಿಣದಲ್ಲಿ 1,08,055 ಪುರುಷರು ಹಾಗೂ 1,01,845 ಮಹಿಳೆಯರು ಸೇರಿ ಒಟ್ಟು 2,09,900 ಮತದಾರರು, ಬೀದರ್ ಕ್ಷೇತ್ರದಲ್ಲಿ 1,17,244 ಪುರುಷರು ಹಾಗೂ 1,13,676 ಮಹಿಳೆಯರು ಸೇರಿ ಒಟ್ಟು 2,30,920 ಮತದಾರರು, ಭಾಲ್ಕಿಯಲ್ಲಿ 1,20,312 ಪುರುಷರು ಹಾಗೂ 1,10,770 ಮಹಿಳೆಯರು ಸೇರಿ ಒಟ್ಟು 2,31,082 ಮತದಾರರು ಹಾಗೂ ಔರಾದ್ ಕ್ಷೇತ್ರದಲ್ಲಿ 1,14,752 ಪುರುಷರು ಹಾಗೂ 1,06,917 ಮಹಿಳೆಯರು ಸೇರಿ ಒಟ್ಟು 2,21,669 ಮತದಾರರು ಇದ್ದಾರೆ ಎಂದು ಹೇಳಿದರು.

ಎಲ್ಲ ವಿಧಾನಸಭಾ ಕ್ಷೇತ್ರಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 13,86,955 ಮತದಾರರು ಇದ್ದಾರೆ. ಇವರಲ್ಲಿ 7,16,175 ಪುರುಷರು ಹಾಗೂ 6,70,780 ಮಹಿಳೆಯರು ಇದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಉಪಸ್ಥಿತರಿದ್ದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗಿ ದತ್ತಾತ್ರಿ ಮೂಲಗೆ, ಅಶೋಕ ಕೋಡಗೆ, ಬಾಬುರಾವ್ ಹೊನ್ನಾ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.