ADVERTISEMENT

ಕಮಲನಗರ: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ, 14 ಎಮ್ಮೆಗಳ ಸಾವು

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 13:57 IST
Last Updated 12 ಜನವರಿ 2022, 13:57 IST
ಕಮಲನಗರ ಪಟ್ಟಣ ರೈಲು ನಿಲ್ದಾಣ ಸಮೀಪದ ಹಳಿಗಳಲ್ಲಿ ಅಪಘಾತದಿಂದ ಸಾವನ್ನಪ್ಪಿದ್ದ ಎಮ್ಮೆಗಳನ್ನು ಜನರು ನೋಡುತ್ತಿರುವುದು
ಕಮಲನಗರ ಪಟ್ಟಣ ರೈಲು ನಿಲ್ದಾಣ ಸಮೀಪದ ಹಳಿಗಳಲ್ಲಿ ಅಪಘಾತದಿಂದ ಸಾವನ್ನಪ್ಪಿದ್ದ ಎಮ್ಮೆಗಳನ್ನು ಜನರು ನೋಡುತ್ತಿರುವುದು   

ಕಮಲನಗರ: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ 14 ಎಮ್ಮೆಗಳು ಮೃತಪಟ್ಟ ಘಟನೆ ಪಟ್ಟಣದ ರೈಲು ನಿಲ್ದಾಣದ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ.

ನಾಂದೇಡ್-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಎಮ್ಮೆಗಳು ಅಡ್ಡ ಬಂದಿವೆ ಎನ್ನುಲಾಗುತ್ತಿವೆ. ಸಂಜೆ 6 ಗಂಟೆಯಾದರೂ ಜಾನುವಾರುಗಳ ಮಾಲೀಕರು ಯಾರು, ಎಲ್ಲಿಂದ ಬಂದಿವೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸುದ್ದಿ ತಿಳಿಯುತ್ತಿದ್ದಂತೆ ಬೀದರ್ ರೈಲ್ವೆ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಭಾಲ್ಕಿ ರೈಲ್ವೆ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ಎಮ್ಮೆಗಳ ಹಿಂಡು ಮದನೂರು ರಸ್ತೆ ಪಕ್ಕದ ಕೆರೆಯಲ್ಲಿ ನೀರು ಕುಡಿದು ಬರುವಾಗ ಹಳಿ ದಾಟುವ ವೇಳೆ ಈ ದುರ್ಘಟನೆ ನಡೆದಿರಬಹುದು ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.