ADVERTISEMENT

ಬೀದರ್‌ಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 13:37 IST
Last Updated 12 ಏಪ್ರಿಲ್ 2019, 13:37 IST
ಬೀದರ್‌ನ ಜನವಾಡ ರಸ್ತೆಯಲ್ಲಿ ಅಬ್ಬರಿಸಿದ ಮಳೆಯಲ್ಲೇ ಸಾಗಿದ ತಾಯಿ ಮಗಳು
ಬೀದರ್‌ನ ಜನವಾಡ ರಸ್ತೆಯಲ್ಲಿ ಅಬ್ಬರಿಸಿದ ಮಳೆಯಲ್ಲೇ ಸಾಗಿದ ತಾಯಿ ಮಗಳು   

ಬೀದರ್‌: ಹದಿನೈದು ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ನಗರದ ಜನತೆಯ ಮೊಗದಲ್ಲಿ ಶುಕ್ರವಾರ ಸಂಜೆ ವರುಣನ ಸಿಂಚನವು ಮಂದಹಾಸ ಮೂಡಿಸಿತು. 15 ನಿಮಿಷ ಅಬ್ಬರಿಸಿದ ಮಳೆಯಿಂದ ನಗರಕ್ಕೆ ತಂಪೆರೆದಂತಾಯಿತು.

ತಾಪಮಾನ ಮಧ್ಯಾಹ್ನ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ನೆತ್ತಿ ಸುಡುವ ಬಿಸಿಲಿಗೆ ಜನ ಬಸವಳಿದಿದ್ದರು ಸಿಮೆಂಟ್‌ ಕಟ್ಟಡಗಳು ಸಹ ಬಿಸಿಯಾಗಿದ್ದವು.

ಮಳೆ ಸುರಿಯುತ್ತಿದ್ದಂತೆಯೇ ನಗರದ ಜನತೆ ಸಂತಸಗೊಂಡರು. ಕೆಲವರು ಮಳೆಯಲ್ಲೇ ಸಾಗಿದರು. ಮಕ್ಕಳು ಮಳೆಯಲ್ಲಿ ಕುಣಿದು ಕುಪ್ಪಳಿಸಿದರು. 10 ನಿಮಿಷದಲ್ಲೇ ನೀರು ಭೂಮಿಯೊಳಗೆ ಇಂಗಿ ಯಥಾಸ್ಥಿತಿಗೆ ಬಂದಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.