ADVERTISEMENT

ಅಭಿಮಾನಿಗಳಿಂದ 18 ಕಿ.ಮೀ ಪಾದಯಾತ್ರೆ

ಉಪ ಚುನಾವಣೆಯಲ್ಲಿ ಶರಣು ಸಲಗರಗೆ ಟಿಕೆಟ್‌ಗಾಗಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:41 IST
Last Updated 21 ಜನವರಿ 2021, 2:41 IST
ಬಸವಕಲ್ಯಾಣ ತಾಲ್ಲೂಕಿನ ಜಾಫರವಾಡಿ ಗ್ರಾಮದ ಇಬ್ಬರು ದಂಪತಿ ಬುಧವಾರ ಶರಣು ಸಲಗರ ಅವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ದೀರ್ಘ ದಂಡ ನಮಸ್ಕಾರ ಹಾಕಿದರು
ಬಸವಕಲ್ಯಾಣ ತಾಲ್ಲೂಕಿನ ಜಾಫರವಾಡಿ ಗ್ರಾಮದ ಇಬ್ಬರು ದಂಪತಿ ಬುಧವಾರ ಶರಣು ಸಲಗರ ಅವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ದೀರ್ಘ ದಂಡ ನಮಸ್ಕಾರ ಹಾಕಿದರು   

ಬಸವಕಲ್ಯಾಣ: ಬಿಜೆಪಿ ಮುಖಂಡ ಶರಣು ಸಲಗರ ಅವರಿಗೆ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ಬುಧವಾರ ಅವರ ಅಭಿಮಾನಿಗಳು ತಾಲ್ಲೂಕಿನ ಜಾಫರವಾಡಿ ಗ್ರಾಮದಿಂದ ಹಾರಕೂಡ ಹಿರೇಮಠದವರೆಗೆ 18 ಕಿಲೊ ಮೀಟರ್‌ ಪಾದಯಾತ್ರೆ ನಡೆಸಿದರು.

ಈ ಸಂದರ್ಭದಲ್ಲಿ ಇಬ್ಬರು ದಂಪತಿ ದೀರ್ಘದಂಡ ನಮಸ್ಕಾರ ಹಾಕಿ ಗಮನ ಸೆಳೆದರು.

ಜಾಫರವಾಡಿ ಗ್ರಾಮದ ಕಸ್ತೂರಬಾಯಿ ಚಂದ್ರಕಾಂತ ಮುಳೆ, ಅನಸೂಯಾಬಾಯಿ ಅಂಬಾರಾಯ ಮೇತ್ರೆ ದೀರ್ಘದಂಡ ನಮಸ್ಕಾರ ಹಾಕಿದ ದಂಪತಿಗಳು.

ADVERTISEMENT

ವಿವಿಧ ಗ್ರಾಮಗಳ 150ಕ್ಕೂ ಹೆಚ್ಚಿನ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಗುಂಡೂರ, ಯಲ್ಲದಗುಂಡಿ, ತಾಂಡಾ ಮೂಲಕ ಪಾದಯಾತ್ರೆ ಹಾರಕೂಡ ತಲುಪಿತು.

ಹಾರಕೂಡ ಹಿರೇಮಠದಲ್ಲಿ ಸುರೇಶ ಮುಳೆ 101 ತೆಂಗು ಅರ್ಪಿಸಿ ಹರಕೆ ತೀರಿಸಿದರು. ಮಠಾಧಿಪತಿ ಚನ್ನವೀರ ಶಿವಾಚಾರ್ಯರು ಈ ದಂಪತಿ ಹಾಗೂ ಇತರರನ್ನು ಸತ್ಕರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ ಪಾದಯಾತ್ರೆಗೆ ಚಾಲನೆ ನೀಡಿದರು.

ಹಿರಿಯ ಮುಖಂಡ ರಾಜಕುಮಾರ ಶಿರಗಾಪುರ, ರತಿಕಾಂತ ಕೊಹಿನೂರ, ಶಿವಕುಮಾರ ಶೆಟಗಾರ, ಸಿದ್ದು ಬಿರಾದಾರ, ಶಿವರಾಜ ತಾಟೆ, ಆನಂದ ಪಾಟೀಲ, ನಿತ್ಯಾನಂದ ಕೊಂಡಗೆ, ಮಹಾರಾಜಪ್ಪ ಮುಳೆ, ಶಾಂತವಿಜಯ ಪಾಟೀಲ, ಪ್ರಕಾಶ ಸುಂಠಾಣೆ, ಸಲ್ಮಾನ್, ನಾಗೇಶ ಮೇತ್ರೆ, ಶಂಭುಲಿಂಗಗುಗಳೆ, ಜ್ಞಾನೇಶ್ವರ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.