ADVERTISEMENT

ಬೊಮ್ಮಗೊಂಡೇಶ್ವರ ಉತ್ಸವಕ್ಕೆ 2 ಸಾವಿರ ಜನ

ತಾಲ್ಲೂಕು ಸಮಿತಿ ರಚನೆ ಸಭೆಯಲ್ಲಿ ಜೋಳದಾಪಕೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 11:53 IST
Last Updated 25 ಫೆಬ್ರುವರಿ 2023, 11:53 IST
ಹುಮನಾಬಾದ್‍ನಲ್ಲಿ ನಡೆದ ಬೊಮ್ಮಗೊಂಡೇಶ್ವರ ಉತ್ಸವದ ತಾಲ್ಲೂಕು ಸಮಿತಿ ರಚನೆ ಸಭೆಯಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿದರು
ಹುಮನಾಬಾದ್‍ನಲ್ಲಿ ನಡೆದ ಬೊಮ್ಮಗೊಂಡೇಶ್ವರ ಉತ್ಸವದ ತಾಲ್ಲೂಕು ಸಮಿತಿ ರಚನೆ ಸಭೆಯಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿದರು   

ಹುಮನಾಬಾದ್: ಬೀದರ್‌ನಲ್ಲಿ ಮಾ. 12ಕ್ಕೆ ನಡೆಯಲಿರುವ ಬೊಮ್ಮಗೊಂಡೇಶ್ವರ ಉತ್ಸವದಲ್ಲಿ ಎರಡು ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಹೇಳಿದರು.
ಚಿಟಗುಪ್ಪ ಹಾಗೂ ಹುಮನಾಬಾದ್‍ನಲ್ಲಿ ನಡೆದ ಬೊಮ್ಮಗೊಂಡೇಶ್ವರ ಉತ್ಸವದ ತಾಲ್ಲೂಕು ಸಮಿತಿ ರಚನೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗೊಂಡ (ಕುರುಬ) ಸಮುದಾಯದ ಜನ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಉತ್ಸವ ಜರುಗಲಿದೆ. ಇದಕ್ಕೂ ಮುನ್ನ ಬೊಮ್ಮಗೊಂಡೇಶ್ವರ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ರಂಗ ಮಂದಿರ ವರೆಗೆ ಅಲಂಕೃತ ರಥದಲ್ಲಿ ಬೊಮ್ಮಗೊಂಡೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಕಳೆ ತಂದು ಕೊಡಲಿವೆ ಎಂದು ಹೇಳಿದರು.
ಉತ್ಸವದ ಯಶಸ್ವಿಗಾಗಿ ಈಗಾಗಲೇ ವಿವಿಧ ತಾಲ್ಲೂಕು ಸಮಿತಿ ರಚಿಸಲಾಗಿದೆ. ಪ್ರತಿ ಗ್ರಾಮಗಳಲ್ಲೂ ಉತ್ಸವದ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಮುಖರಾದ ಅಶೋಕ ಸೊಂಡೆ, ಉತ್ತಮ ನಂದಗಾಂವ್, ಬಸವರಾಜ ವಾಡಿ, ಶ್ರೀನಿವಾಸ ಹುಡಗಿಕರ್,
ಅಶೋಕ ಚಳಕಾಪುರೆ, ಎಂ.ಪಿ. ವೈಜಿನಾಥ, ಸಂಜುಕುಮಾರ ವಡ್ಡನಕೇರಾ, ಸಿದ್ದು ಮೋಳಕೇರಾ, ಪ್ರಶಾಂತ ಸುಲ್ತಾನ್‍ಬಾದ್ ವಾಡಿ, ಮಲ್ಲಿಕಾರ್ಜುನ ಮೋಳಕೇರಾ, ಸಾಯಿಕಿರಣ ಬೈನೂರು ಮೊದಲಾದವರು ಇದ್ದರು.

ADVERTISEMENT

ಹುಮನಾಬಾದ್, ಚಿಟಗುಪ್ಪ ತಾಲ್ಲೂಕು ಸಮಿತಿ ರಚನೆ

ಬೊಮ್ಮಗೊಂಡೇಶ್ವರ ಉತ್ಸವದ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಹುಮನಾಬಾದ್: ಅಶೋಕ ಸೊಂಡೆ (ಗೌರವಾಧ್ಯಕ್ಷ), ಉತ್ತಮ ನಂದಗಾಂವ್ (ಅಧ್ಯಕ್ಷ), ವಿನಾಯಕ ಮೇಣಕೋಜಿ, ಅರುಣ ಮಾಳಗೊಂಡ, ಗುಂಡಪ್ಪ ಧನಗರಗಲ್ಲಿ (ಉಪಾಧ್ಯಕ್ಷ), ಉಮೇಶ ದಾಡಗಿ (ಪ್ರಧಾನ ಕಾರ್ಯದರ್ಶಿ), ಮಲ್ಲಿಕಾರ್ಜುನ ಹುಮನಾಬಾದೆ (ಕಾರ್ಯದರ್ಶಿ), ಮಲ್ಲಿಕಾರ್ಜುನ ಇಟಗಿ (ಸಂಘಟನಾ ಕಾರ್ಯದರ್ಶಿ), ಸುನೀಲ್ ಮಲ್ಕಾಪುರವಾಡಿ, ರಮೇಶ ಸುಲ್ತಾನ್‍ಬಾದ್‍ವಾಡಿ (ಸಹ ಕಾರ್ಯದರ್ಶಿ).

ಚಿಟಗುಪ್ಪ: ಬಸವರಾಜ ವಾಡಿ (ಗೌರವಾಧ್ಯಕ್ಷ), ಶ್ರೀನಿವಾಸ ಹುಡಗಿಕರ್ (ಅಧ್ಯಕ್ಷ), ಸೂರ್ಯಕಾಂತ ವಗದಾಳೆ (ಕಾರ್ಯಾಧ್ಯಕ್ಷ), ಶಿವಕುಮಾರ ಹಿಪ್ಪರ್ಗಿ, ಧನರಾಜ ಮೇತ್ರೆ, ಶರಣು ಸಿಂಧನಕೇರಾ (ಉಪಾಧ್ಯಕ್ಷ), ತುಕಾರಾಮ ಹಳ್ಳಿಖೇಡ (ಪ್ರಧಾನ ಕಾರ್ಯದರ್ಶಿ), ಶ್ರಾವಣಕುಮಾರ ಮೇತ್ರೆ (ಕಾರ್ಯದರ್ಶಿ), ಸಂತೋಷ ಹಂದಿಕೇರಾ (ಸಂಘಟನಾ ಕಾರ್ಯದರ್ಶಿ), ರಾಜು ಪೂಜಾರಿ, ಶ್ರವಣಕುಮಾರ ಔರಾದಕರ್ (ಸಹ ಕಾರ್ಯದರ್ಶಿ), ಪಂಡಿತ ಕಲ್ಯಾಣಿ, ಬಸವರಾಜ ಮೇತ್ರೆ, ತಿಪ್ಪಣ್ಣ ಕಮಠಾಣೆ (ಗೌರವ ಸಲಹೆಗಾರರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.