ADVERTISEMENT

ನುಲಿ ಚಂದಯ್ಯ ಭವನಕ್ಕೆ ₹50 ಲಕ್ಷ

ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಲಗರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 4:54 IST
Last Updated 28 ಜೂನ್ 2021, 4:54 IST
ಬಸವಕಲ್ಯಾಣದಲ್ಲಿ ಈಚೆಗೆ ಶರಣ ನುಲಿ ಚಂದಯ್ಯ ಸಮುದಾಯ ಭವನಕ್ಕೆ ಶಾಸಕ ಶರಣು ಸಲಗರ ಶಂಕುಸ್ಥಾಪನೆ ನೆರವೇರಿಸಿದರು
ಬಸವಕಲ್ಯಾಣದಲ್ಲಿ ಈಚೆಗೆ ಶರಣ ನುಲಿ ಚಂದಯ್ಯ ಸಮುದಾಯ ಭವನಕ್ಕೆ ಶಾಸಕ ಶರಣು ಸಲಗರ ಶಂಕುಸ್ಥಾಪನೆ ನೆರವೇರಿಸಿದರು   

ಬಸವಕಲ್ಯಾಣ: ‘ನಗರದಲ್ಲಿ ಶರಣ ನುಲಿ ಚಂದಯ್ಯ ಸಮುದಾಯ ಭವನ ನಿರ್ಮಾಣಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಪ್ರಯತ್ನದಿಂದ ₹50 ಲಕ್ಷ ಅನುದಾನ ಮಂಜೂರಾಗಿದೆ’ ಎಂದು ಶಾಸಕ ಶರಣು ಸಲಗರ ತಿಳಿಸಿದರು.

ನಗರದ ಧರ್ಮಪ್ರಕಾಶ ಓಣಿಯಲ್ಲಿ ಈಚೆಗೆ ಶರಣ ನುಲಿ ಚಂದಯ್ಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನುಲಿ ಚಂದಯ್ಯನವರು ಕಾಯಕಯೋಗಿ ಆಗಿದ್ದರು. ಕಾಯಕವು ದೇವರನ್ನು ಒಲಿಸುವ ಸಾಧನ ಎಂದು ನಂಬಿದ್ದರು. ಬಸವಣ್ಣನವರ ಜತೆಯಲ್ಲಿದ್ದ ಶರಣಗಣದಲ್ಲಿ ಅವರು ಒಬ್ಬರಾಗಿದ್ದರು. ಅವರ ಹೆಸರಿನಲ್ಲಿನ ಈ ಭವನಕ್ಕೆ ಇಷ್ಟೇ ಅನುದಾನ ಸಾಕಾಗುವುದಿಲ್ಲ. ಆದ್ದರಿಂದ ಇನ್ನೂ ₹70 ಲಕ್ಷ ಹಣಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದ್ದು ಅದರ ಮಂಜೂರಾತಿಗೆ ಪ್ರಯತ್ನಿಸುತ್ತೇನೆ’ ಎಂದರು.

ADVERTISEMENT

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಮುಖಂಡ ದಿಗಂಬರ ಜಲ್ದೆ, ರವಿ ನಾವದಗೇಕರ್, ಎಇಇ ಶಿವರಾಜ ಮಾತನಾಡಿದರು.

ಚಿತ್ರಮ್ಮತಾಯಿ, ಯುವರಾಜ ಭೆಂಡೆ, ತುಕಾರಾಮ ಲಾಡೆ, ಶಾಂತಾ ಬಾಯಿ ಲಾಡೆ, ಕಾವೇರಿ ಭೆಂಡೆ, ಧನ ರಾಜ ಚಾಂಕಾಣ, ಚಂದ್ರಕಾಂತ ತೊಗ್ಲೆ, ಸಂಜೀವ ಸುಗೂರೆ, ಸಂಜೀವ ಮೂಲಗೆ, ಚನ್ನವೀರ ಸಂಗೊಳ್ಳಿ, ಭಾಗಣ್ಣ ಸಂಗೊಳ್ಳಿ, ಶಿರೋಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.