ADVERTISEMENT

ಶರಣ ಸಂಸ್ಕೃತಿಯಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 8:53 IST
Last Updated 8 ಜನವರಿ 2018, 8:53 IST

ಸ್ವಾರ್ಥದ ಬೆನ್ನಿಗೆ ಬಿದಿರುವ ವ್ಯಕ್ತಿ ತನ್ನ ಅಮೂಲ್ಯ ಸಂಬಂಧವನ್ನು ಕಡೆಗಣಿಸುತ್ತಿರುವುದಕ್ಕೆ ಕಾರಣ. ಹಲವು ಒತ್ತಡಗಳಿಗೆ ಸಿಲುಕಿ ಅತ್ಯಂತ ಶ್ರೇಷ್ಠವಾದ ಬದುಕನನ್ನು ಕಳೆದುಕೊಳ್ಳುತ್ತಿದ್ದಾನೆ. ಹೆತ್ತ ವರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವಲ್ಲಿ ವಿಫಲವಾಗಿರುವುದಕ್ಕೆ ತಾಯಿ,ತಂದೆ ಇಬ್ಬರೂ ಹಣ ಗಳಿಕೆಯಲ್ಲಿ ಇಡೀ ದಿನ ಕಳೆಯುತ್ತಿರುವುದು ಕಾರಣವಾಗಿದೆ. ಇದರಿಂದ ಮಕ್ಕಳು ಮತ್ತು ಪಾಲಕರ ಮಧ್ಯ ಪ್ರೀತಿಯ ಬಂಧ ಕಳಚುತ್ತಿದೆ. ಬದುಕು ಯಾಂತ್ರಿಕವಾಗುತ್ತಿದೆ. ಪಾಲಕರು ಚಿಕ್ಕಂದಿನಿಂದಲೇ ವಿದ್ಯೆ ನೆಪದಲ್ಲಿ ಮಕ್ಕಳನ್ನು ವಸತಿ ನಿಲಯಗಳಲ್ಲಿ ಬಿಡುತ್ತಿದ್ದಾರೆ. ಅವರ ಋಣ ತೀರಿಸಲು ಪೋಷಕರನ್ನು ವಯಸ್ಸಾದ ಕಾಲದಲ್ಲಿ ವೃದ್ಧಾಶ್ರಮಗಳಲ್ಲಿ ಬಿಡುತ್ತಿದ್ದಾರೆ. ಇದರಿಂದಾಗಿ ಸಂಬಂಧಗಳಿಗೆ ಯಾವುದೇ ಮಹತ್ವ ಇಲ್ಲದಂತಾಗಿದೆ

ಬಸವಣ್ಣವರ ‘ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ’ ಸಪ್ತಸೂತ್ರದಲ್ಲಿ ಜೀವನದಲ್ಲಿನ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ಕುಟುಂಬಗಳಲ್ಲಿ ಸಿಟ್ಟು, ತಕ್ಷಣ ಸಿಡುಕುತನ ಇತ್ಯಾದಿ ಕಾರಣ ನೂರ್ಕಾಲ ಬಾಳಿ ಬದುಕಬೇಕಾದ ಜೀವನ ಆರಂಭದಲ್ಲೇ ಅಂತ್ಯ ಕಾಣುತ್ತಿವೆ. ವಿವಾಹ ವಿಚ್ಛೇದನದಂಥ ಪ್ರಕರಣಗಳಿಗೆ ಅಂತ್ಯ ಹೇಳುವ ಅಗತ್ಯವಿದೆ. ಉತ್ತಮ ಜೀವನ ಸಾಗಿಸುವ ಮೂಲಕ ಪಾಲಕರು ಮಕ್ಕಳಿಗೆ ಮಾದರಿಯಾಗಬೇಕು. ಚಿಂತೆ ಬಿಟ್ಟು, ಚಿಂತನೆ ಮಾಡಿದರೆ ಜೀವನ ಸಾರ್ಥಕಗೊಳ್ಳುತ್ತದೆ. ಶಿವನ ಧ್ಯಾನದಿಂದ ದುಷ್ಟ ವಿಚಾರಗಳು ಮನಸ್ಸಿನಿಂದ ದೂರ ತಳ್ಳಲ್ಪಡುತ್ತವೆ. ಶಿವಧ್ಯಾನ ಮಾಡಿದವರು ಶತಾಯುಷಿಗಳಾಗುತ್ತಾರೆ.

ಋಣಾತ್ಮಕ ಚಿಂತನೆಯಿಂದ ವ್ಯಕ್ತಿ ರೋಗಿ ಆಗುತ್ತಾನೆ. ಧನಾತ್ಮಕ ಚಿಂತನೆಯಿಂದ ನಿರೋಗಿಯಾಗುತ್ತಾನೆ. ದೈವದತ್ತವಾಗಿ ಲಭಿಸಿರುವ ಕಿವಿ, ಕಣ್ಣು, ಮೂಗನ್ನು ಸದ್ಬಳಕೆ ಮಾಡಿಕೊಂಡರೇ ಜೀವನ ಸಾರ್ಥಕ ಆಗುತ್ತದೆ. ದುರ್ಬಳಕೆ ಆದರೆ ವ್ಯರ್ಥ ಹಾಳಾಗುತ್ತದೆ. ಶಿಕ್ಷಣ, ಶಿಸ್ತು ಮತ್ತು ಶಿಷ್ಟಾಚಾರ ಸಾರ್ಥಕ ಜೀವನದಲ್ಲಿ ಪ್ರಮುಖ ತತ್ವಗಳು. ಅವುಗಳನ್ನು ಅಳವಡಿಸಿಕೊಂಡಲ್ಲಿ ಬದುಕು ಅರ್ಥಪೂರ್ಣವಾಗುತ್ತದೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಒಬ್ಬರ ಪ್ರಗತಿ ಕಂಡು ಪ್ರೋತ್ಸಾಹಿಸದೇ ಕಾಲೆಳೆಯುವಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನುಷ್ಯ ಮಾನವೀಯ ಮೌಲ್ಯ ಸಂಪೂರ್ಣ ಕಡೆಗಣಿಸುತ್ತಿದ್ದಾನೆ.

ADVERTISEMENT

ಚಪ್ಪಾಳೆ ತಟ್ಟುವುದರಿಂದ ರಕ್ತ ಪರಿಚಲನೆಯಾಗಿ ಮನುಷ್ಯನ ಬುದ್ದಿ ಚುರುಕುಗೊಂಡು ಕ್ರಿಯಾಶೀಲನಾಗುತ್ತಾನೆ. ನಿತ್ಯ ಬರಿ ಹೊಟ್ಟೆಗೆ ನೀರು ಸೇವಿಸುವುದರಿಂದ ಜೀರ್ಣ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಚರ್ಮ ಕಾಯಿಲೆ ಸನಿಹಕ್ಕೆ ಬರುವುದಿಲ್ಲ. ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಾತ ನಿರೋಗಿಯಾಗಿದರೇ, ಸೋಮಾರಿ ಸದಾ ರೋಗಿಯಾಗಿರುತ್ತಾನೆ. ಉತ್ತಮ ಜತೆ ಸೇರಿ ಸದಾಚಾರಿಗಳಾಗಲು ಸತ್ಸಂಗ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.