ADVERTISEMENT

ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 9:15 IST
Last Updated 30 ಜನವರಿ 2018, 9:15 IST
ವಿದ್ಯಾರ್ಥಿನಿ ಕೊಲೆ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಭಾಲ್ಕಿಯಲ್ಲಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ವಿದ್ಯಾರ್ಥಿನಿ ಕೊಲೆ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಭಾಲ್ಕಿಯಲ್ಲಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಭಾಲ್ಕಿ: ವಿದ್ಯಾರ್ಥಿನಿ ಕೊಲೆ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಈಶ್ವರ ರುಮ್ಮಾ ಮಾತನಾಡಿ, ವಿದ್ಯಾರ್ಥಿನಿ ಕೊಲೆ ಪ್ರಕರಣದ ಉನ್ನತ ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು. ಕುಟುಂಬಕ್ಕೆ ಸರ್ಕಾರ ಕೂಡಲೇ ₹25 ಲಕ್ಷ ಘೋಷಣೆ ಮಾಡಬೇಕು. ಸಮಾಜದಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ಹೀನ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಆಗ್ರಹಿಸಿದರು.

ಬೋಮ್ಮಗೊಂಡೇಶ್ವರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ವೃತ್ತ, ರಸ್ತೆಗಳ ಮೂಲಕ ತಾಲ್ಲೂಕು ಕಚೇರಿಯಲ್ಲಿ ಸಮಾವೇಶಗೊಂಡಿತ್ತು.

ADVERTISEMENT

ಎಬಿವಿಪಿ ನಗರ ಕಾರ್ಯದರ್ಶಿ ಕಿರಣ ಕಾಂಬಳೆ, ಪ್ರಮುಖರಾದ ವಿಶಾಲ ಘಾಳೆ, ಕಿರಣ ಡೊಂಗರೆ, ಆನಂದ ಬಸವರಾಜ, ವಿಜಯಕುಮಾರ, ಪವನ ಸಿಂಧೆ, ಅಭಿಷೇಕ, ರವಿ, ಪೂಜಾ, ಜ್ಯೋತಿ, ರವಿನಾ, ವಿನಿತಾ, ಲಕ್ಷ್ಮಿ, ದೃಷ್ಟಿ ಇದ್ದರು.

ವಕೀಲರ ಸಂಘದ ಆಗ್ರಹ: ತಾಲ್ಲೂಕಿನ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ವಕೀಲರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿ ಸೋಮವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಭುಸಗುಂಡೆ, ಉಪಾಧ್ಯಕ್ಷ ಸತೀಶ ಲದ್ದೆ, ಕಾರ್ಯದರ್ಶಿ ಸತೀಶ ಬೋರಾಳೆ, ಜಂಟಿ ಕಾರ್ಯದರ್ಶಿ ಯೋಗೇಶ ಭಂಡೆ, ಪ್ರಮುಖರಾದ ಪ್ರಕಾಶ ಮಾಶೆಟ್ಟೆ, ಸುಧೀರ್‌ ನಾಯಕ, ವಕೀಲರಾದ ಸುರೇಶ ಬಿರಾದಾರ, ಮಹೇಶ ರಾಚೋಟೆ, ಮಹಾದೇವ ಕಾಶಿಸ್ವಾಮಿ, ಸಂಗಪ್ಪ ಗಾಮಾ, ಪ್ರಸನ್ನ ದೇಶಪಾಂಡೆ, ಸತೀಶ ಬಿರಾದಾರ, ಶಿವಕುಮಾರ ಕೇರೂರೆ, ಸೂರ್ಯಕಾಂತ ಪಾಟೀಲ, ಮಹೇಶ ಪರಸಣ್ಣೆ, ವೆಂಕಟ ಉಮಾಜೀ, ದಯಾನಂದ ಪವಾರ್, ಅಂಬರೀಶ ಬೇಂದ್ರೆ, ಡಿ.ಎಂ.ಶ್ರೀಮಾಳೆ, ಸುನಿಲ್‌ ಕುಲಕರ್ಣಿ, ಶಾಂತಕುಮಾರ, ಎನ್.ಬಿ.ಪಾಟೀಲ, ಎನ್.ಎನ್.ಸ್ವಾಮಿ, ಗುರುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.