ಕಮಲನಗರ (ಬೀದರ್ ಜಿಲ್ಲೆ): ತಾಲ್ಲೂಕಿನ ಚಾಂಡೇಶ್ವರ ಗ್ರಾಮದ ಹೊರವಲಯದ ಖೇಡ್ ರಸ್ತೆ ಬಳಿಯ ಹೊಲದಲ್ಲಿ ತಲೆ ಮೇಲೆ ಕಲ್ಲು ಹಾಕಿ ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ.
ಚಾಂಡೇಶ್ವರ ಗ್ರಾಮದ ಗಂಗಶೆಟ್ಟಿ ಅಲಿಯಾಸ್ ಸಾಗರ ಧನರಾಜ ಧಭಾಲೆ (26) ಕೊಲೆಯಾದ ಯುವಕ ಎಂದು ಗೊತ್ತಾಗಿದೆ.
ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಭಾಲ್ಕಿ ಡಿವೈಎಸ್ಪಿ ಶಿವಾನಂದ್ ಪವಾಡ ಶೆಟ್ಟಿ, ಕಮಲನಗರ ಸಿಪಿಐ ಅಮರೆಪ್ಪ ಶಿವಬಲ್, ಭಾಲ್ಕಿ ಸಿಪಿಐ ಹಣಮರೆಡ್ಡೆಪ್ಪ, ಕಮಲನಗರ ಪಿಎಸ್ಐ ಚಂದ್ರಶೇಖರ್ ನಿರ್ಣೆ, ಪಿಎಸ್ಐ ಬಾಲಾಜಿ ಬೆಳಕಟ್ಟೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಕೊಲೆಗೆ ಖಚಿತ ಕಾರಣ ತಿಳಿದು ಬಂದಿಲ್ಲ. ಕೊಲೆ ಆರೋಪಿ ಶೋಧ ಕಾರ್ಯ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.