ADVERTISEMENT

ಬೀದರ್: ಆಪ್‌ ಜಾಗೃತಿ ಕಾಲ್ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 3 ಮೇ 2022, 4:59 IST
Last Updated 3 ಮೇ 2022, 4:59 IST
ಬೀದರ್‌ನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಕ್ಷದ ಯೋಜನೆಗಳ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾ ನಡೆಸಿದರು
ಬೀದರ್‌ನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಕ್ಷದ ಯೋಜನೆಗಳ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾ ನಡೆಸಿದರು   

ಬೀದರ್: ಆಮ್ ಆದ್ಮಿ ಪಾರ್ಟಿ(ಆಪ್)ಯ ಜನ ಕಲ್ಯಾಣ ಯೋಜನೆಗಳ ಜಾಗೃತಿ ಮೂಡಿಸಲು ಪಕ್ಷದ ಕಾರ್ಯಕರ್ತರು ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭಿಸಿ ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇರುವ ನಗರಸಭೆ ಕಾಂಪ್ಲೆಕ್ಸ್ ಬಳಿ ಬಂದು ಕೊನೆಗೊಳಿಸಿದರು.

ನಗರಸಭೆಯ ಸಂಕೀರ್ಣದಲ್ಲಿನ ಪಕ್ಷದ ಬೀದರ್ ನಗರ ಘಟಕದ ಕಚೇರಿಯನ್ನು ಜಿಲ್ಲಾ ಹೂಗಾರ ಸಮಾಜದ ಉಪಾಧ್ಯಕ್ಷ ಬಸವರಾಜ ಹೂಗಾರ ಉದ್ಘಾಟಿಸಿದರು.

ADVERTISEMENT

ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷದ ಬಲವರ್ಧನೆಗೆ ಒತ್ತು ಕೊಡಲಾಗಿದೆ. ಈಗಾಗಲೇ ಜಿಲ್ಲಾ, ತಾಲ್ಲೂಕು ಘಟಕಗಳ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಬರುವ ದಿನಗಳಲ್ಲಿ ಳಿದ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಮಾಲಗಾರ್ ಹೇಳಿದರು.

ರಾಮಕುಮಾರ ಸೇರಿ ಹಲವರು ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಮೀಲ್ ಅಹಮ್ಮದ್ ಖಾದ್ರಿ, ನಗರಸಭೆ ಸದಸ್ಯ ಗುಲಾಂ ಅಲಿ, ಮುಖಂಡರಾದ ಗಂಧರ್ವ ಸೇನಾ, ಸಿದ್ದಪ್ಪ ಇದ್ದರು.

ಆಪ್ ನಗರ ಘಟಕಕ್ಕೆ ಸಿದ್ದಪ್ಪ ಅಧ್ಯಕ್ಷ
ಬೀದರ್:
ಆಮ್ ಆದ್ಮಿ ಪಕ್ಷದ ಬೀದರ್ ನಗರ ಘಟಕದ ಅಧ್ಯಕ್ಷರಾಗಿ ಸಿದ್ದಪ್ಪ ಫುಲಾರಿ ಅವರನ್ನು ನೇಮಕ ಮಾಡಲಾಗಿದೆ.

ಅವಿನಾಶ (ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ), ವಕೀಲ ಕೈಲಾಶ ದುಬೆ(ಸಂಘಟನಾ ಕಾರ್ಯದರ್ಶಿ), ಶಿವರಾಜ ಬುಧೇರಾ(ಬೀದರ್ ದಕ್ಷಿಣ ಘಟಕದ ಅಧ್ಯಕ್ಷ) ಹಾಗೂ ದಿನೇಶ ಮಿರಾಗಂಜ್(ಬೀದರ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ) ಅವರನ್ನು ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.