ADVERTISEMENT

ಕಮಲನಗರ: ಅಕ್ಕಮಹಾದೇವಿ ಮೂರ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 20:00 IST
Last Updated 2 ಡಿಸೆಂಬರ್ 2019, 20:00 IST
ಕಮಲನಗರದಲ್ಲಿ ಈಚೆಗೆ ನಡೆದ ಅಕ್ಕಮಹಾದೇವಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಮಾತನಾಡಿದರು
ಕಮಲನಗರದಲ್ಲಿ ಈಚೆಗೆ ನಡೆದ ಅಕ್ಕಮಹಾದೇವಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಮಾತನಾಡಿದರು   

ಕಮಲನಗರ: ‘ಬಸವಣ್ಣನವರು ಸ್ತ್ರೀಕುಲದ ಉದ್ಧಾರಕರು. ಅನುಭವ ಮಂಟಪದ ಕಾರ್ಯಕಲಾಪಗಳಲ್ಲಿ ಮಹಿಳೆಯರಿಗೂ ಸ್ಥಾನ ನೀಡಿ, ಅವರು ಪುರುಷರಿಗೆ ಸಮಾನರು ಎಂದು ಸಾರಿದ್ದರು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ವೃತ್ತದ ಬಳಿ ಆಯೋಜಿಸಿದ್ದ ‘ವೀರ ವೈರಾಗ್ಯನಿಧಿ ಅಕ್ಕ ಮಹಾದೇವಿ ಮೂರ್ತಿ ಅನಾವರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವತತ್ವದ ನಿಜಾಚರಣೆಯಿಂದ ಜಗತ್ತಿನಲ್ಲಿ ಶಾಂತಿ ನೆಲೆಸಬಲ್ಲದು ಎಂದರು.

ನಿಷ್ಕಲ್ಮಶ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ,‘ವಚನಗಳಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ಸಾಹಿತ್ಯ ಉತ್ತಮವಾಗಿ ಬದುಕಲು ಪ್ರೇರಣೆ ನೀಡುತ್ತದೆ’ ಎಂದರು.

ADVERTISEMENT

ಭಾಲ್ಕಿ ಹಿರೇಮಠದ ಪೀಠಾಧ್ಯಕ್ಷ ಗುರುಬಸವ ಪಟ್ಟದ್ದೇವರ ಮಾತನಾಡಿ,‘ಶ್ರದ್ಧೆ ಇದ್ದರೆ ಮಾತ್ರ ಗುರು ಕೃಪೆ ಆಗುತ್ತದೆ. ದೇವರ ಸೃಷ್ಠಿಯಲ್ಲಿ ದುಖ:ವೇ ಇಲ್ಲ. ಮನುಷ್ಯ ಹುಟ್ಟಿದ್ದು, ಬದುಕಿದ್ದು ಸುಖದಲ್ಲಿ. ಸಾಯುವುದೂ ಸುಖಕ್ಕಾಗಿಯೇ. ಆನಂದ ಪ್ರತಿ ಜೀವಿಯ ಪರಮ ಲಕ್ಷ್ಯ ಆಗಿದೆ’ ಎಂದರು.

ಸಂಸದ ಭಗವಂತ ಖೂಬಾ, ಬಸವಕಲ್ಯಾಣದ ನಿಜಗುಣಾನಂದ ಸ್ವಾಮಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟೆ, ಗ್ರಾಪಂ ಉಪಾಧ್ಯಕ್ಷ ಸಂತೋಷ ಬಿರಾದಾರ, ಶಾಂತಕುಮಾರ ಬಿರಾದಾರ, ಪ್ರಭುರಾವ ಬಿರಾದಾರ, ರಾಜಕುಮಾರ ಬಿರಾದಾರ, ಶಿವರಾಜ ಪಾಟೀಲ, ರಾಚಪ್ಪ ಪಾಟೀಲ, ಬಸವರಾಜ ಶಿವಣಕರ, ರಾಜಕುಮಾರ ಪೊಲೀಸ್ ಪಾಟೀಲ, ಡಾ.ನಂದಕಿಶೋರ ದಂಡವತೆ, ಪ್ರಕಾಶ ಸೋಲ್ಲಪುರೆ, ಬಾನಾ ಸೋಲ್ಲಪುರೆ, ಕಲ್ಲಪ್ಪ ಶಿವಣಕರ ಹಾಗೂ ಚನ್ನಬಸವ ಘಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.