
ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದಲ್ಲಿನ ಅಂಗನವಾಡಿ (ಸಿ) ಕೇಂದ್ರದಲ್ಲಿ ಎಲ್ಲ ರಾಷ್ಟ್ರ ಪುರುಷರ ಭಾವಚಿತ್ರಗಳನ್ನು ಗೋಡೆಗೆ ನೇತುಹಾಕಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮಾತ್ರ ಅಡುಗೆ ಕೋಣೆಯ ಕಟ್ಟೆಯ ಕೆಳಗಡೆ ಇಟ್ಟು ಅವಮಾನ ಮಾಡಲಾಗಿದೆ ಎಂದು ಬಿ.ಎಸ್.ಪಿ ಗ್ರಾಮ ಘಟಕದ ಅಧ್ಯಕ್ಷ ದಿಲೀಪ ಶಿರೋಳೆ ಅವರು ಸಿಡಿಪಿಒ ಗೌತಮ ಶಿಂಧೆ ಅವರಿಗೆ ಗುರುವಾರ ದೂರು ಸಲ್ಲಿಸಿದ್ದಾರೆ.
ಈ ಕೇಂದ್ರದ ಕಾರ್ಯಕರ್ತೆ ಮಂಗಲಾ ಅವರಿಗೆ ಈ ಬಗ್ಗೆ ವಿಚಾರಿಸಿದಾಗ ಉದ್ಧಟತನದಿಂದ ವರ್ತಿಸಿದ್ದಾರೆ. ಆದ್ದರಿಂದ ಅವರನ್ನು ಅಮಾನತುಗೊಳಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕಾರ್ಯಕರ್ತರಾದ ಸಾಗರ ಯಮ್ಹಾನ್, ಪ್ರಶಾಂತ ಪ್ರತಾಪ, ಸುನಿಲ ಕಾಂಬಳೆ, ಅಣ್ಣಾರಾಯ ಯಮ್ಹಾನ್, ಮಲ್ಲಿಕಾರ್ಜುನ ಹಾರಕೂಡೆ, ಹಣಮಂತ ಯಮ್ಹಾನ್ ಉಪಸ್ಥಿತರಿದ್ದರು. ದಲಿತ ಸೇನಾ ತಾಲ್ಲೂಕು ಅಧ್ಯಕ್ಷ ಪ್ರಫುಲ್ ಗಾಯಕವಾಡ ನೇತೃತ್ವದಲ್ಲಿ ಕೂಡ ಕಾರ್ಯಕರ್ತೆಯ ಮೇಲೆ ಕ್ರಮಕ್ಕೆ ಆಗ್ರಹಿಸಿ ಸಿಡಿಪಿಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.