ADVERTISEMENT

‘ಪ್ರಾಣಿ, ಪಕ್ಷಿಗಳ ರಕ್ಷಣೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 13:08 IST
Last Updated 13 ಸೆಪ್ಟೆಂಬರ್ 2022, 13:08 IST
ಔರಾದ್ ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಪರಿಸರವಾದಿ ಶೈಲೇಂದ್ರ ಕಾವಡಿ ಉದ್ಘಾಟಿಸಿದರು
ಔರಾದ್ ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಪರಿಸರವಾದಿ ಶೈಲೇಂದ್ರ ಕಾವಡಿ ಉದ್ಘಾಟಿಸಿದರು   

ಔರಾದ್: ‘ಪರಿಸರ ಸಂರಕ್ಷಣೆ ಜತೆಗೆ ಪ್ರಾಣಿ, ಪಕ್ಷಿಗಳ ರಕ್ಷಣೆಯೂ ಅಗತ್ಯ’ ಎಂದು ಪರಿಸರವಾದಿ ಶೈಲೇಂದ್ರ ಕಾವಡಿ ಹೇಳಿದರು.

ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ ನಿಸರ್ಗ ಇಕೋ ಕ್ಲಬ್ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಸರ ಅಸಮತೋಲನದಿಂದ ಭೂತಾಪಮಾನ ಹೆಚ್ಚಳವಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಭೂ ತಾಪಮಾನ ಹೆಚ್ಚಳದಿಂದ ಜೀವ ವೈವಿಧ್ಯತೆ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

ADVERTISEMENT

‘ಔರಾದ್ ತಾಲ್ಲೂಕು ಜಿಲ್ಲೆಯಲ್ಲಿಯೇ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ತಾಲ್ಲೂಕಾಗಿದೆ. ಹೀಗಾಗಿ ಇಲ್ಲಿ ಹೆಚ್ಚು ಅರಣ್ಯ ಬೆಳೆಸುವ ಕೆಲಸ ಆಗಬೇಕು’ ಎಂದರು.

ಶಿಕ್ಷಕ ಉಮಕಾಂತ ಚೋಪಡೆ ಅಧ್ಯಕ್ಷತೆ ವಹಿಸಿ ಮಾತನಾಡಿ,‘ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಮನೆ ಅಂಗಳದಲ್ಲಿ ಕಡ್ಡಾಯವಾಗಿ ಸಸಿ ಬೆಳೆಸಿ ಪೋಷಿಸಬೇಕು’ ಎಂದು ಹೇಳಿದರು.

ಮುಖ್ಯಶಿಕ್ಷಕ ಅಜಯಕುಮಾರ ದುಬೆ, ವಿಜ್ಞಾನ ಶಿಕ್ಷಕ ಚಂದ್ರಕಾಂತ ಮಾತನಾಡಿದರು.

ಶಿಕ್ಷಕರಾದ ಶಿವಲಿಂಗ ಹೇಡೆ, ಸಂತೋಷ ಮುಕ್ರಂಬೆ, ಬಾಲಿಕಾ, ಆಶಾ, ಪೂರ್ಣಿಮಾ ಇದ್ದರು. ವಿದ್ಯಾರ್ಥಿನಿ ದೇವಿಕಾ ನಿರೂಪಿಸಿದರು. ಬೇಬಿ ಸ್ವಾಗತಿಸಿದರು. ಅಂಕಿತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.