ಭಾಲ್ಕಿ: ‘ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಏಕಾದಶಿಯ ಪ್ರಯುಕ್ತ ಶ್ರೀ ಕ್ಷೇತ್ರ ಪಂಢರಪುರದ ವಿಠ್ಠಲ-ರುಕ್ಮಿಣಿ ದೇವರ ದರ್ಶನಕ್ಕಾಗಿ ಭಕ್ತರ ಹರಿವು ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ ಇಲಾಖೆಯು ವಿಶೇಷ ರೈಲು ಸೇವೆ ಕಲ್ಪಿಸಿದೆ. ಕ್ಷೇತ್ರದ ಭಕ್ತರು ಈ ವಿಶೇಷ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಸಾಗರ್ ಖಂಡ್ರೆ ಮನವಿ ಮಾಡಿದ್ದಾರೆ.
ಈ ವಿಶೇಷ ರೈಲು ಜುಲೈ 5ರಂದು ಭಾಲ್ಕಿ ರೈಲು ನಿಲ್ದಾಣಕ್ಕೆ ರಾತ್ರಿ 9:15 ಗಂಟೆಗೆ ಆಗಮಿಸಿ, 9:17 ಗಂಟೆಗೆ ಹೊರಡಲಿದ್ದು, ನಂತರ ಬೀದರ್ ನಿಲ್ದಾಣಕ್ಕೆ 9:50 ಗಂಟೆಗೆ ಆಗಮಿಸಿ 9:52 ಗಂಟೆಗೆ ಪಂಢರಪುರದತ್ತ ಪ್ರಯಾಣ ಮುಂದುವರಿಸುತ್ತದೆ. ರೈಲು ಜುಲೈ 6ರ ಬೆಳಿಗ್ಗೆ 8:15 ಗಂಟೆಗೆ ಪಂಢರಪುರ ತಲುಪಲಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.