ADVERTISEMENT

ಲೆಕ್ಕ ಪರಿಶೋಧನೆಗೆ ಸಹಕರಿಸಿ: ರಾಹುಲ್ ಕೈವಾರೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:19 IST
Last Updated 3 ಜೂನ್ 2025, 13:19 IST
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾದಲ್ಲಿ ಲೆಕ್ಕ ಪರಿಶೋಧನೆಯ ಪೂರ್ವಭಾವಿ ಸಭೆಯಲ್ಲಿ ಲೆಕ್ಕ ಪರಿಶೋಧನೆ ಕಾರ್ಯಕ್ರಮದ ವ್ಯವಸ್ಥಾಪಕ ರಾಹುಲ್ ಕೈವಾರೆ ಮಾತನಾಡಿದರು
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾದಲ್ಲಿ ಲೆಕ್ಕ ಪರಿಶೋಧನೆಯ ಪೂರ್ವಭಾವಿ ಸಭೆಯಲ್ಲಿ ಲೆಕ್ಕ ಪರಿಶೋಧನೆ ಕಾರ್ಯಕ್ರಮದ ವ್ಯವಸ್ಥಾಪಕ ರಾಹುಲ್ ಕೈವಾರೆ ಮಾತನಾಡಿದರು   

ಚಿಟಗುಪ್ಪ (ಹುಮನಾಬಾದ್): ಸಾಮಾಜಿಕ ಲೆಕ್ಕ ಪರಿಶೋಧನೆಗೆ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮದ ವ್ಯವಸ್ಥಾಪಕ ರಾಹುಲ್ ಕೈವಾರೆ ಹೇಳಿದರು.

ತಾಲ್ಲೂಕಿನ ಬೇಮಳಖೇಡಾ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನೆಯ ಕಾರ್ಯಕ್ರಮ ಜೂನ್ 2ರಿಂದ ಆರಂಭವಾಗಿದ್ದು, 10ರವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಜರುಗುತ್ತದೆ. ಎಲ್ಲಾ ಕಡತಗಳನ್ನು ನೀಡಬೇಕು. ಜೂನ್ 10 ರಂದು ಬೆಳಗ್ಗೆ 10ಕ್ಕೆ ಈ ಗ್ರಾಮ ಪಂಚಾಯಿತಿ ಆವಣದಲ್ಲಿ ಗ್ರಾಮ ಸಭೆ ಜರುಗಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಒಂದು ದಿನ ಮುಂಚಿತವಾಗಿ ಡಂಗೂರ ಸಾರಿ ಗ್ರಾಮ ಸಭೆ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಸುಣಗಾರ, ಅಭಿವೃದ್ಧಿ ಅಧಿಕಾರಿ ಸುಶಾಂತ್ ಕುಮಾರ್, ಐಇಸಿ ಸಂಯೋಜಕ ವಿಶ್ವನಾಥ, ಮಹೀಬೂಬ್, ರಜನಿಕಾಂತ ವರ್ಮಾ ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.