ಚಿಟಗುಪ್ಪ: ಶಿರಸ್ತೇದಾರ್ ಸುಭಾಷ್ ಚಂದ್ರ ಅವರ ಮೇಲೆ ಆರೋಪದಲ್ಲಿ ಗ್ರೇಡ್–2 ತಹಶೀಲ್ದಾರ್ ಜಯಶ್ರೀ ಅವರ ಪತಿ ಶಾರಧಕ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೇ16ರಂದು ಶಿರಸ್ತೇದಾರ್ ಸುಭಾಷ್ ಚಂದ್ರ ಕೆಲಸ ಮುಗಿಸಿಕೊಂಡು ಚಿಟಗುಪ್ಪದಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೆಪೇಟ ಗ್ರಾಮಕ್ಕೆ ಬಸ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಶಾರಧಕ ಹಾಗೂ ಇತರರು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸುಭಾಷ್ ಚಂದ್ರ ಮೇ 20ರಂದು ನೀಡಿದ ದೂರಿನನ್ವಯ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಶಾರಧಕ, ಗ್ರೇಡ್–2 ತಹಶೀಲ್ದಾರ್ ಜಯಶ್ರೀ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.