ADVERTISEMENT

ಬಾವಿಗೆ ಬಿದ್ದಿದ್ದ ಜಿಂಕೆಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 7:55 IST
Last Updated 27 ಜೂನ್ 2020, 7:55 IST
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರದಲ್ಲಿ ಶುಕ್ರವಾರ ಬಾವಿಯೊಂದರಲ್ಲಿ ಬಿದ್ದಿದ್ದ ಜಿಂಕೆ ಮರಿಯನ್ನು ಅಗ್ನಿಶಾಮಕ ಠಾಣೆಯವರು ರಕ್ಷಿಸಿದರು
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರದಲ್ಲಿ ಶುಕ್ರವಾರ ಬಾವಿಯೊಂದರಲ್ಲಿ ಬಿದ್ದಿದ್ದ ಜಿಂಕೆ ಮರಿಯನ್ನು ಅಗ್ನಿಶಾಮಕ ಠಾಣೆಯವರು ರಕ್ಷಿಸಿದರು   

ಬಸವಕಲ್ಯಾಣ: ತಾಲ್ಲೂಕಿನ ಪ್ರತಾಪುರದ ಬಾವಿಯೊಂದರಲ್ಲಿ ಬಿದ್ದಿದ್ದ ಜಿಂಕೆ ಮರಿಯನ್ನು ಇಲ್ಲಿನ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹೊರತೆಗೆದು ರಕ್ಷಣೆ ಮಾಡಿದ್ದಾರೆ.

ಹೆಚ್ಚಿನ ನೀರಿಲ್ಲದ ಹಾಳು ಬಾವಿಯಲ್ಲಿ ಜಿಂಕೆಮರಿ ಆಕಸ್ಮಿಕವಾಗಿ ಬಿದ್ದು ಹೊರಕ್ಕೆ ಬರಲಾಗದೆ ಒದ್ದಾಡುತ್ತಿತ್ತು. ಆಗ ಕೆಲವರು ಈ ಬಗ್ಗೆ ಅಗ್ನಿಶಾಮಕ ಠಾಣೆಯವರಿಗೆ ತಿಳಿಸಿದಾಗ ಠಾಣೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬಾಯಿಯೊಳಗೆ ಹೋಗಿ ಜಿಂಕೆಮರಿಗೆ ಹಗ್ಗ ಕಟ್ಟಿ ಹೊರ ತೆಗೆದು ಪ್ರಾಣ ರಕ್ಷಿಸಿದ್ದಾರೆ. ನಂತರ ಅದನ್ನು ಅಡವಿಯಲ್ಲಿ ಬಿಡಲಾಯಿತು.

ಠಾಣಾಧಿಕಾರಿ ಪ್ರವೀಣ ಕಲಶೆಟ್ಟಿ, ಸಿಬ್ಬಂದಿಯವರಾದ ಶ್ರೀಕರ ಮುಳೆ, ರುದ್ರಮುನಿಸ್ವಾಮಿ, ಮಲ್ಲಿಕಾರ್ಜುನ ಪಾಟೀಲ, ಶಿವರಾಜ ವೀರಗೊಂಡ, ಶಂಭುಲಿಂಗ ಬಿರಾಜದಾರ ಅವರ ಪರಿಶ್ರಮದಿಂದ ಜಿಂಕೆಮರಿ ಬದುಕುಳಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.