ಆಣದೂರುವಾಡಿ (ಜನವಾಡ): ಬೀದರ್ ತಾಲ್ಲೂಕಿನ ಆಣದೂರುವಾಡಿ ಅರಣ್ಯ ಪ್ರದೇಶದ ಸಮೀಪ ಯುವಕರ ತಂಡವೊಂದು ಭಾನುವಾರ ಬೀದಿ ನಾಯಿ ದಾಳಿಯಿಂದ ಜಿಂಕೆ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದೆ.
ಆಹಾರ ಅರಸಿ ನಾಡಿಗೆ ಬಂದ ಜಿಂಕೆ ಮರಿ ಮೇಲೆ ಬೀದಿ ನಾಯಿ ದಾಳಿ ನಡೆಸಿತ್ತು. ಇದನ್ನು ಗಮನಿಸಿದ ಸಮೀಪದಲ್ಲಿಯೇ ಇದ್ದ ಯುವಕರು ಬೀದಿ ನಾಯಿಯನ್ನು ಓಡಿಸಿ, ಜಿಂಕೆ ಮರಿ ರಕ್ಷಣೆ ಮಾಡಿದರು. ಬಳಿಕ ಪಶು ವೈದ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರು.
ಸ್ಥಳಕ್ಕೆ ಬಂದ ಪಶು ವೈದ್ಯರು ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಯುವಕರು ಅದನ್ನು ಉಪ ವಲಯ ಅರಣ್ಯ ಅಧಿಕಾರಿ ಶಾಂತಕುಮಾರ ಹಾಗೂ ಸಿಬ್ಬಂದಿ ಸಂಗಮೇಶ ಪಾಟೀಲ ಅವರಿಗೆ ಒಪ್ಪಿಸಿದರು.
ಬೀದಿ ನಾಯಿ ದಾಳಿಯಿಂದ ಜಿಂಕೆಯ ಕಣ್ಣು, ತಲೆ ಭಾಗಕ್ಕೆ ಗಾಯವಾಗಿದ್ದು, ಪಶು ವೈದ್ಯರ ಚಿಕಿತ್ಸೆ ನಂತರ ಚೇತರಿಸಿಕೊಂಡಿದೆ ಎಂದು ಆಣದೂರಿನ ಸ್ವಾಮಿ ವಿವೇಕಾನಂದ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚೇತನ್ ಸೋರಳ್ಳಿ ತಿಳಿಸಿದರು.
ಈ ವೇಳೆ ಯುವಕರಾದ ಆಕಾಶ್ ಪಸರ್ಗಿ, ಅಭಿಷೇಕ ಅಷ್ಟೂರೆ, ವಿಶಾಲ್ ನೌಬಾದೆ, ಗುರುಸ್ವಾಮಿ, ಸುನೀಲ್, ಸಂಗಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.