ADVERTISEMENT

ಚಿಟಗುಪ್ಪ: ಭಗೀರಥ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:26 IST
Last Updated 14 ಮೇ 2022, 2:26 IST
ಚಿಟಗುಪ್ಪ ಪಟ್ಟಣದ ಸೂರ್ಯನಾರಾಯಣ ದೇಗುಲದಲ್ಲಿ ಉಪ್ಪಾರ ಸಮುದಾಯದಿಂದ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು
ಚಿಟಗುಪ್ಪ ಪಟ್ಟಣದ ಸೂರ್ಯನಾರಾಯಣ ದೇಗುಲದಲ್ಲಿ ಉಪ್ಪಾರ ಸಮುದಾಯದಿಂದ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು   

ಪ್ರಜಾವಾಣಿ ವಾರ್ತೆ

ಚಿಟಗುಪ್ಪ: ‘ಲೋಕ ಕಲ್ಯಾಣಕ್ಕೆ ಗಂಗೆಯನ್ನು ಧರೆಗೆ ತರಲು ನಿರಂತರ ಶ್ರಮವಹಿಸಿ ಯಶಸ್ಸು ಪಡೆದ ಮಹಾತ್ಮ ಮಹರ್ಷಿ ಭಗೀರಥರಾಗಿದ್ದಾರೆ’ ಎಂದು ಪಟ್ಟಣ ಉಪ್ಪಾರ ಸಮುದಾಯದ ಅಧ್ಯಕ್ಷ ಗಣಪತಿ ಎಡತೆ ಹೇಳಿದರು.

ಇಲ್ಲಿಯ ಸೂರ್ಯನಾರಾಯಣ ದೇಗುಲದಲ್ಲಿ ಶುಕ್ರವಾರ ನಡೆದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಲಾಯಿತು. ನಂತರ ಪಾಲ್ಗೊಂಡ ಎಲ್ಲ ಭಕ್ತರಿಗೆ ಪ್ರಸಾದ
ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣಪ್ಪ ಸುಡಶೆಟ್ಟಿ, ವಿಶ್ವನಾಥ ಬರ್ಲಾ, ಶಿವರಾಜ್ ಒಡ್ಡೆಪಲ್ಲಿ, ಶಂಕರ್‌, ನಾಗಪ್ಪ ಎಡತೆ, ರಾಜು ಆರೆಟ್, ಪ್ರವೀಣ ರಾಜಾಪುರ್‌ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.