ಕಮಲನಗರ: ‘ಡಿಸೆಂಬರ್ 12 ರಂದು ಬಸವಜ್ಯೋತಿ ಪಾದಯಾತ್ರೆ ಆರಂಭವಾಗಲಿದೆ’ ಎಂದು ಡಾ.ಚನ್ನಬಸವ ಪಟ್ಟದ್ದೇವರು ಯುವಕ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ತಿಳಿಸಿದ್ದಾರೆ.
ಪಟ್ಟಣದ ಭಾಲ್ಕಿ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಬೆಳಿಗ್ಗೆ 11ಕ್ಕೆ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯು ಡಿಗ್ಗಿ, ಹೋಳಸಮುದ್ರ ಹಾಗೂ ಸಾವಳಿ ಮೂಲಕ ಸಾಗಿ ಸಂಗಮದಲ್ಲಿ ತಲುಪಲಿದೆ ಎಂದರು.
ಡಿ.13 ರಂದು ಬೆಳಿಗ್ಗೆ 9ಕ್ಕೆ ಸಂಗಮ ಗ್ರಾಮದಿಂದ ಆರಂಭಗೊಳ್ಳುವ ಪಾದಯಾತ್ರೆಯೂ ಆಳಂದಿ, ಡೋಣಗಾಪುರದ ಮೂಲಕ ಭಾಲ್ಕಿಯ ಚನ್ನಬಸವಾಶ್ರಮ ತಲುಪಲಿದೆ. ಅಲ್ಲಿ ಸಮಾರೋಪ ನಡೆಯಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.