ADVERTISEMENT

ಮೂಲ ಅನುಭವ ಮಂಟಪ ಸಂರಕ್ಷಿಸಿ: ಸಾಗರ ದಂಡೋತಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:22 IST
Last Updated 21 ಮೇ 2022, 4:22 IST
ಸಾಗರ ದಂಡೋತಿ
ಸಾಗರ ದಂಡೋತಿ   

ಬಸವಕಲ್ಯಾಣ: ‘ನಗರದಲ್ಲಿನ 12ನೇ ಶತಮಾನದ ಮೂಲ ಅನುಭವ ಮಂಟಪದ ಸಂರಕ್ಷಣೆ ಆಗಬೇಕು. ಬಸವಾದಿ ಶರಣರ ಕಾಲದ ಗತವೈಭವ ಮತ್ತೆ ಮರುಕಳಿಸುವಂತೆ ಪ್ರಯತ್ನಿಸಬೇಕು’ ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ತಾಲ್ಲೂಕು ಸಂಚಾಲಕ ಸಾಗರ ದಂಡೋತಿ ಆಗ್ರಹಿಸಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಅಂದಿನ ಅನುಭವ ಮಂಟಪದ ಕುರುಹುಗಳು ನಗರದಲ್ಲಿ ಇವೆ. ಸಂಬಂಧಿತರು ಆ ಸ್ಥಳವನ್ನು ವಶಕ್ಕೆ ಪಡೆದು ಅಲ್ಲಿ ಇನ್ನಷ್ಟು ಸಂಶೋಧನೆ, ಪರಿಶೀಲನೆ ನಡೆಸಿ ಅದರ ಜೀರ್ಣೋ ದ್ಧಾರಗೈಯಬೇಕು. ಅನೇಕ ರಾಜರ ದಾಳಿಗೆ ತುತ್ತಾಗಿ ದ್ದರೂ ಆ ಸ್ಥಳ ಇನ್ನೂ ಕೆಲ ಪ್ರಮಾಣದಲ್ಲಿ ಸುಸ್ಥಿತಿಯಲ್ಲಿಯೇ ಇದೆ. ಆದರೆ ಆ ಜಾಗದ ಹೆಸರು ಬದಲಾಗಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕಾಶಿಯಲ್ಲಿನ ಕೆಲ ಧಾರ್ಮಿಕ ಸ್ಥಳಗಳನ್ನು ವಶಕ್ಕೆ ಪಡೆದಂತೆ ಇಲ್ಲಿಯೂ ಆ ಕಾರ್ಯ ನೆರವೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಅನೇಕರು ಹಲವಾರು ಸಲ ಆಗ್ರಹಿಸಿದರೂ ಸಂಬಂಧಿತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನು ಮುಂದಾದರೂ ಹೀಗಾಗಬಾರದು’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.