ಬೀದರ್: ಸತತ ಮಳೆ ಸುರಿಯುತ್ತಿರುವುದು ಹಾಗೂ ಮಹಾರಾಷ್ಟ್ರದ ಮೂರು ಜಲಾಶಯಗಳಿಂದ ನದಿಗೆ ನೀರು ಹರಿಸಿದ ಪರಿಣಾಮ ಜಿಲ್ಲೆಯ ಹುಲಸೂರ ಸಮೀಪದ ತೋರಿ ಬಸವಣ್ಣ ದೇವಸ್ಥಾನ ಮಂಗಳವಾರ ಜಲಾವೃತಗೊಂಡಿದೆ.
ಮಹಾರಾಷ್ಟ್ರದ ತೇರ್ಣಾ, ಹೊಸೂರು, ಮಸಲ್ಗಾ ಜಲಾಶಯದಿಂದ 80 ಸಾವಿರ ಕ್ಯುಸೆಕ್ ನೀರು ಹರಿಸಿದ ಪರಿಣಾಮ ಮಾಂಜ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹುಲಸೂರ–ಮೆಹಕರ್, ಹಲಸಿತೂಗಾಂವ್–ಮಹಾರಾಷ್ಟ್ರದ ಔರಾದ್ ಶಹಜಾನಿ, ವಾಂಜರಖೇಡಾ–ಮಹಾರಾಷ್ಟ್ರದ ನೀಲಂಗಾ ಸಂಪರ್ಕ ರಸ್ತೆ ಕಡಿತಗೊಂಡಿದೆ. ಹುಲಸೂರ ತಾಲ್ಲೂಕು ವ್ಯಾಪ್ತಿಯಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ.
ಭಾಲ್ಕಿ ತಾಲ್ಲೂಕಿನ ಇಂಚೂರ್ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ಮಹಾರಾಷ್ಟ್ರದ ಲಾತೂರ್, ನೀಲಂಗಾಕ್ಕೆ ಸಂಪರ್ಕ ಕಡಿತಗೊಂಡಿದೆ. ಬೀದರ್ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಿನವಿಡೀ ದಟ್ಟ ಕಾರ್ಮೋಡ ಕವಿದಿತ್ತು. ಬಿಟ್ಟು ಬಿಟ್ಟು ದಿನವಿಡೀ ಜಿಟಿಜಿಟಿ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.