ADVERTISEMENT

ಹುಮನಾಬಾದ್: ಉತ್ತಮ ನಾಗರಿಕರಾಗುವುದೇ ಕಾಣಿಕೆ

ಮಾಣಿಕ್ ಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:03 IST
Last Updated 27 ಜುಲೈ 2021, 4:03 IST
ಹುಮನಾಬಾದ್ ತಾಲ್ಲೂಕಿನ ಮಾಣಿಕ ನಗರದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು
ಹುಮನಾಬಾದ್ ತಾಲ್ಲೂಕಿನ ಮಾಣಿಕ ನಗರದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು   

ಹುಮನಾಬಾದ್: ‘ಗುರು ಪರಂಪರೆ ಯನ್ನು ಗೌರವದಿಂದ ಕಾಣಲು ಗುರು ವಂದನೆ ಎಂಬ ವಿನೂತನ ಕಾರ್ಯಕ್ರಮ ಭಾರತದಲ್ಲಿ ಹೆಚ್ಚು ಮೌಲ್ಯವನ್ನು ಪಡೆದುಕೊಂಡಿದೆ’ ಎಂದು ಮಾಣಿಕ್ ಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ಹೇಳಿದರು.

ತಾಲ್ಲೂಕಿನ ಮಾಣಿಕನಗರದ ಮಾಣಿಕ ಪ್ರಭು ಹಿಂದಿ ಮಹಾವಿದ್ಯಾಲ ಯದಲ್ಲಿ 1990ನೇ ಸಾಲಿನಲ್ಲಿ ತೇರ್ಗಡೆ ಯಾದ ವಿದ್ಯಾರ್ಥಿ ವೃಂದದಿಂದ ಎಲ್ಲಾ ಹಿರಿಯ ಶಿಕ್ಷಕರಿಗೆ ಏರ್ಪಡಿಸಿದ್ದ ಗುರು ವಂದನಾ ಕಾರ್ಯ ಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಶಿಷ್ಯರು ಉತ್ತಮ ನಾಗರಿಕರಾಗು ವುದೇ ಗುರುವಿಗೆ ನೀಡುವ ಅತ್ಯುನ್ನತ ಕಾಣಿಕೆ ಆಗಿದೆ’ ಎಂದರು.

ADVERTISEMENT

ಮಾಣಿಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಸುಮಂಗಲಾ ಜಹಾಗೀರದಾರ, ಹಿರಿಯ ಶಿಕ್ಷಕರಾದ ಜಿ.ಎಚ್.ಕನಕಟಕರ್, ಈಶ್ವರರಾವ್ ಹಬೀಬ್, ವೀರಯ್ಯಾ ಕಲಮಠ, ಮಾಣಿಕಪ್ಪಾ, ತುಕಾರಾಮ ಬಂದೆ, ಓಜಪ್ಪಾ ಮುಗಳಿ, ಸುಭಾಶರಾವ್ ಖಡಕೆ ಅವರನ್ನು ಶಿಷ್ಯವೃಂದದಿಂದ ಸನ್ಮಾನಿಸಲಾಯಿತು.

ಪ್ರಮುಖರಾದ ಅಜಯ, ಉಮೇಶ, ಗೋಪಾಲ್, ಭೀಮಸೇನ್, ಪಾಂಡುರಂಗ, ಸುನೀಲ್, ಲಕ್ಷ್ಮಣ, ನಟರಾಜ್, ಶಿವರಾಜ, ರಾವುಜಿ, ಕಿರಣ, ಪ್ರಲ್ಹಾದ್‌, ಅಮರ, ಹರಿದಾಸ, ಗುರುರಾಜ, ಮಾಣಿಕದಾಸ, ಸಂಜಯ, ಸೋನುಬಾಯಿ, ಸಂತೋಷಿ, ಅನುರಾಧಾ, ಮಂಜುಳಾ, ಸುಧೀಘ್ನ, ಸುನಿತಾ, ಶಾಮಲಾ, ಸಿಂಧುಮತಿ, ಲಕ್ಷ್ಮೀಕಾಂತ, ಉಷಾ ಬಂದೆ, ಅರುಂಧತಿ ಭಾಗವತ, ಮಂಗೇಶ ಖಡಕೆ, ಪ್ರಭು ಪಂಚಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.