ADVERTISEMENT

ರೈತರ ಕಬ್ಬಿಗೆ ಉತ್ತಮ ಬೆಲೆ: ಸಿದ್ರಾಮ

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬು ನುರಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 16:16 IST
Last Updated 10 ನವೆಂಬರ್ 2020, 16:16 IST
ಜನವಾಡದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಕೆ ಕಾರ್ಯಕ್ಕೆ ಜಿಲ್ಲೆಯ ಸ್ವಾಮೀಜಿಗಳ ಸಮ್ಮುಖದಲ್ಲಿ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಚಾಲನೆ ನೀಡಿದರು
ಜನವಾಡದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಕೆ ಕಾರ್ಯಕ್ಕೆ ಜಿಲ್ಲೆಯ ಸ್ವಾಮೀಜಿಗಳ ಸಮ್ಮುಖದಲ್ಲಿ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಚಾಲನೆ ನೀಡಿದರು   

ಜನವಾಡ: ‘ಗುರುಪಾದಪ್ಪ ನಾಗಮಾರಪಳ್ಳಿ ಅವರು ಸ್ಥಾಪಿಸಿರುವ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಜಿಲ್ಲೆಯ ನಂಬರ್‌ ಒನ್‌ ಕಾರ್ಖಾನೆಯಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿ ರೈತರಿಗೆ ಉತ್ತಮ ಬೆಲೆ ನೀಡುವ ಉದ್ದೇಶ ಹೊಂದಿದೆ’ ಎಂದು ಕಾರ್ಖಾನೆಯ ಅಧ್ಯಕ್ಷ ಡಿ.ಕೆ.ಸಿದ್ರಾಮ ಹೇಳಿದರು.

ಜನವಾಡದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಕೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರು ತಮ್ಮ ಕಬ್ಬನ್ನು ನಾರಂಜಾ ಕಾರ್ಖಾನೆಗೆ ಸಾಗಿಸಬೇಕು. ಕಾರ್ಖಾನೆ ನಿಗದಿತ ಅವಧಿಯೊಳಗೆ ರೈತರಿಗೆ ಬೆಲೆ ಪಾವತಿಸಲಿದೆ’ ಎಂದು ಸ್ಪಷ್ಟವಾಗಿ ನುಡಿದರು.

ADVERTISEMENT

ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಭಾತಂಬ್ರಾದ ಶಿವಯೋಗೇಶ್ವರ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಮೇಹಕರ ರಾಜೇಶ್ವರದ ರಾಜೇಶ್ವರ ಶಿವಾಚಾರ್ಯರು, ಸಾಯಗಾಂವದ ಶ್ರೀಗಳು, ಗುರುಬಸವ ಪಟ್ಟದ್ದೇವರು, ವಿಧಾನ ಪರಿಷತ್ತಿನ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಇದ್ದರು.

ಕಾರ್ಖಾನೆ ಉಪಾಧ್ಯಕ್ಷ ಬಾಲಾಜಿ ಚವ್ಹಾಣ, ನಿರ್ದೇಶಕರಾದ ಝರೆಪ್ಪ ಮಮದಾಪೂರೆ, ಚಂದ್ರಕಾಂತ ಪಾಟೀಲ, ರಾಜಕುಮಾರ ಕರಂಜಿ, ಶಂಕರೆಪ್ಪ ಪಾಟೀಲ, ಶಿವಬಸಪ್ಪ ಚನ್ನಮಲ್ಲೆ, ಸಿದ್ರಾಮ ವಾಗಮಾರೆ, ವಿಜಯಕುಮಾರ ಪಾಟೀಲ, ಸಿತಾರಾಮ ಖೇಮಾ, ಶೋಭಾವತಿ ಪಾಟೀಲ, ಮಲ್ಲಮ್ಮ ಪಾಟೀಲ, ಶಶಿಕುಮಾರ ಪಾಟೀಲ, ವೀರಶೆಟ್ಟಿ ಪಟ್ನೆ, ನಾಗರೆಡ್ಡಿ ಯಾಚೆ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಪರಂಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.