ADVERTISEMENT

ಭಗತಸಿಂಗ್‌ ದೇಶಭಕ್ತಿ ಯುವಕರಿಗೆ ಮಾದರಿ: ರಾಜಕುಮಾರ ನಾಯ್ಕ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 7:25 IST
Last Updated 6 ಅಕ್ಟೋಬರ್ 2025, 7:25 IST
ಔರಾದ್ ಪಟ್ಟಣದಲ್ಲಿ ನಡೆದ ಭಗತಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಪಾಲ್ಗೊಂಡರು
ಔರಾದ್ ಪಟ್ಟಣದಲ್ಲಿ ನಡೆದ ಭಗತಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಪಾಲ್ಗೊಂಡರು   

ಔರಾದ್: ‘ಅಪ್ಪಟ್ಟ ದೇಶಪ್ರೇಮಿಯಾಗಿದ್ದ ಭಗತಸಿಂಗ್ ಅವರ ಆದರ್ಶ ಇಂದಿನ ಯುವಕರಿಗೆ ಮಾದರಿಯಾಗಬೇಕು’ ಎಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ರಾಜಕುಮಾರ ನಾಯ್ಕ ಹೇಳಿದರು.

ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಭಗತಸಿಂಗ್ ಜಯಂತಿ ಕಾರ್ಯಕ್ರದಲ್ಲಿ ಅವರು ಮಾತನಾಡಿ, ‘ಬಾಲ್ಯದಿಂದಲೇ ದೇಶಭಕ್ತಿ ಮೈಗೂಡಿಸಿಕೊಂಡಿರುವ ಭಗತಸಿಂಗ್ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಇಂತಹ ಹುತಾತ್ಮರಿಂದಲೇ ಈ ದೇಶ ಭವ್ಯ ಭಾರತ ಎನಿಸಿಕೊಂಡಿದೆ’ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕ ಸತೀಶ ಪಾಂಚಾಳ ಮಾತನಾಡಿ, ‘ಭಗತಸಿಂಗ್ ಅವರು ದೇಶಕ್ಕಾಗಿ ಸಂತೋಷದಿಂದಲೇ ಪ್ರಾಣ ಕೊಟ್ಟವರು. ಪ್ರತಿಯೊಬ್ಬ ಭಾರತೀಯ ತಮ್ಮ ವೈಯಕ್ತಿಕ ಹಿತಾಶಕ್ತಿ ಮರೆತು ದೇಶಕ್ಕಾಗಿ ಒಂದಾಗಬೇಕಾಗಿದೆ’ ಎಂದು ಹೇಳಿದರು.

ADVERTISEMENT

ಎಬಿವಿಪಿ ಮುಖಂಡ ಅಶೋಕ ಶೆಂಬೆಳ್ಳಿ, ಬಸವರಾಜ ಚೌಕಂಪಳ್ಳೆ, ಅಂಬಾದಾಸ ನೇಳಗೆ, ಪಪ್ಪು ಹಕ್ಕೆ, ಆಕಾಸ, ಅನೀಲ, ರಾಹುಲ್, ಚಂದು, ಕೇಶವ ಹಕ್ಕೆ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.