ADVERTISEMENT

ಭಗವದ್ಗೀತೆ ಪರೀಕ್ಷೆ: ಬಸವಲಿಂಗಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 23 ಮೇ 2022, 15:35 IST
Last Updated 23 ಮೇ 2022, 15:35 IST
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಗವದ್ಗೀತೆ ಕಂಠ ಪಾಠ ಪರೀಕ್ಷೆಯಲ್ಲಿ ಸಾಧನೆಗೈದ ಬಸವಲಿಂಗ ಮೂಲಗೆ ಅವರಿಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಿದರು
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಗವದ್ಗೀತೆ ಕಂಠ ಪಾಠ ಪರೀಕ್ಷೆಯಲ್ಲಿ ಸಾಧನೆಗೈದ ಬಸವಲಿಂಗ ಮೂಲಗೆ ಅವರಿಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಿದರು   

ಬೀದರ್: ಜಿಲ್ಲೆಯ ಗಡಿಯಲ್ಲಿ ಇರುವ ರತ್ನಾಪುರದ ಬಸವಲಿಂಗ ಮೂಲಗೆ ಭಗವದ್ಗೀತೆ ಕಂಠ ಪಾಠ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.


ಬಸವಲಿಂಗ ಅವಧೂತ ಆಶ್ರಮದಲ್ಲಿ ಒಂದು ವರ್ಷ ಭಗವದ್ಗೀತೆಯ ಎಲ್ಲ 770 ಶ್ಲೋಕಗಳ ಅಧ್ಯಯನ ಮಾಡಿದ ಅವರು, ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮ ನಡೆಸಿದ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.


ಬಸವಲಿಂಗ ಅವರು ರೈತ ದಂಪತಿ ಗಿರಿಜಾ ಹಾಗೂ ಶಿವಕುಮಾರ ಮೂಲಗೆ ಅವರ ಪುತ್ರರಾಗಿದ್ದಾರೆ.
ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಪ್ರಮಾಣ ಪತ್ರ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.

ADVERTISEMENT


ಭಗವದ್ಗೀತೆ ಕಂಠ ಪಾಠ ಪರೀಕ್ಷೆಯಲ್ಲಿ ಬಸವಲಿಂಗ ಮೂಲಗೆ ಅವರ ಸಾಧನೆಗೆ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.