ADVERTISEMENT

ಭಾಲ್ಕಿ | ಬಿಜೆಪಿಯಿಂದ ಸಸಿ ನಾಟಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:35 IST
Last Updated 23 ಜೂನ್ 2025, 15:35 IST
ಭಾಲ್ಕಿಯ ಗುರುಪ್ರಸನ್ನ ಕಾಲೇಜು ಆವರಣದಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಸಸಿ ನೆಟ್ಟು ನೀರುಣಿಸಿದರು 
ಭಾಲ್ಕಿಯ ಗುರುಪ್ರಸನ್ನ ಕಾಲೇಜು ಆವರಣದಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಸಸಿ ನೆಟ್ಟು ನೀರುಣಿಸಿದರು    

ಭಾಲ್ಕಿ: ತಾಲ್ಲೂಕು ಬಿಜೆಪಿ ವತಿಯಿಂದ ಶ್ಯಾಮ್ ಪ್ರಸಾದ ಮುಖರ್ಜಿ ಪುಣ್ಯತಿಥಿ ಅಂಗವಾಗಿ ಸೋಮವಾರ ಬಲಿದಾನ ದಿವಸ್ ಕಾರ್ಯಕ್ರಮ ನಡೆಸಲಾಯಿತು. ಇದೇ ವೇಳೆ, ‘ಏಕ್ ಪೇಡ್ ಮಾ ಕೆ ನಾಮ್’(ಒಂದು ಗಿಡ ತಾಯಿ ಹೆಸರಿನಲ್ಲಿ) ಅಭಿಯಾನಕ್ಕೂ ಚಾಲನೆ ನೀಡಲಾಯಿತು.

ಪಟ್ಟಣದ ಗುರುಪ್ರಸನ್ನ ಪದವಿ ಕಾಲೇಜಿನ ಆವರಣದಲ್ಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಸಸಿ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪಕ್ಷದ ಎಲ್ಲ ಕಾರ್ಯಕರ್ತರು ಹೆಚ್ಚೆಚ್ಚು ಗಿಡಗಳನ್ನು ನೆಡಬೇಕು. ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮಗಳನ್ನು ಕೂಡ ಕಾರ್ಯಕರ್ತರು ನಡೆಸಬೇಕು ಎಂದರು.

ADVERTISEMENT

ಬಿಜೆಪಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಮಾಜಿ ಅಧ್ಯಕ್ಷ ಗೋವಿಂದರಾವ್ ಬಿರಾದಾರ, ಪ್ರಮುಖರಾದ ಬಾಬುರಾವ್ ಧೂಪೆ, ಪಂಡರಿ ಮೇತ್ರೆ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.