
ಭಾಲ್ಕಿ: ‘ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಕಲಿಕೆಯ ಮೇಲಿನ ಆಸಕ್ತಿ ಹೆಚ್ಚಿಸಲು ಎಫ್‌ಎಲ್‌ಎನ್ ಕಲಿಕಾ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತಿವೆ’ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟ್ಕರ್ ಹೇಳಿದರು.
ತಾಲ್ಲೂಕಿನ ಕೋಟಗ್ಯಾಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಡೋಣಗಾಪುರ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕಾ ಹಬ್ಬಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು, ಕಲಿಕೆಯನ್ನು ಸಂತಸದಾಯಕವಾಗಿಸುತ್ತವೆ. 1 ರಿಂದ 5ನೇ ತರಗತಿಯ ಮಕ್ಕಳಿಗೆ ಆಯೋಜಿಸುವ ಈ ಚಟುವಟಿಕೆಗಳು ಸಮುದಾಯದಲ್ಲಿ ಶಾಲೆಗಳ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತವೆ ಎಂದರು.
ಬಿ.ಆರ್.ಪಿ ಸಂಜುಕುಮಾರ ಸಾವರೇ ಮಾತನಾಡಿ, ‘ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ, ಆತ್ಮವಿಶ್ವಾಸ ಮತ್ತು ಸಕ್ರೀಯ ಕಲಿಕೆ ಬೆಳೆಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದು ಹೇಳಿದರು.
ಬಿಆರ್‌ಪಿ ಸಂತೋಷ ಮುಧೋಳೆ, ಚೇತನಾ, ಸಿಆರ್‌ಪಿ ಅಶೋಕ ಕಲ್ಯಾಣೆ, ಮಹೇಶ ಕೊರಾಳೆ, ಸತ್ಯವಾನ ಕಾಂಬಳೆ, ಸಂದೀಪ ವಾಡೇಕರ್, ಸಂತೋಷ ಧಬಾಲೆ, ಮುಖ್ಯಶಿಕ್ಷಕರಾದ ಶ್ರೀದೇವಿ ಬಿರಾದರ, ಪ್ರಭಾಕರ ಪಾಟೀಲ, ಸಿಆರ್‌ಪಿ ಚಂದ್ರಕಾಂತ ತಳವಾಡೆ, ಗಂಗಾಧರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.