ಭಾಲ್ಕಿ: ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್.ಪಾಟೀಲ, ‘ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಸಾಪ ದುಡಿಯುತ್ತಿದೆ. ಕೇಂದ್ರ ಸಾಹಿತ್ಯ ಪರಿಷತ್‍ನಲ್ಲಿ ಸುಮಾರು 1,750 ಸಾವಿರ ಪುಸ್ತಕಗಳ ಭಂಡಾರವಿದೆ. ದೇಶದಲ್ಲಿಯೇ ಅತಿ ಹಳೆಯದಾದ ಬೃಹತ್ ಪರಿಷತ್ ಕನ್ನಡ ಸಾಹಿತ್ಯ ಪರಿಷತ್ ಆಗಿದೆ’ ಎಂದು ಹೇಳಿದರು.
ವಿಶೇಷ ಉಪನ್ಯಾಸ ಮಂಡಿಸಿದ ಹಿರಿಯ ಸಾಹಿತಿ ವೀರಶೆಟ್ಟಿ ಬಾವುಗೆ, ‘ಆದಷ್ಟು ಬೇಗ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ತಾಲ್ಲೂಕಿನಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಮುಖರಾದ ಹಣಮಂತ ಕಾರಾಮುಂಗೆ, ಚೇತನಾ ಚನಶೆಟ್ಟಿ, ಸುಭಾಷ ಹುಲಸೂರೆ, ನೇಕಾರ ಸಮಾಜದ ಬಾಬುರಾವ್ ಖ್ಯಾಡೆ, ಭದ್ರೇಶ ಗುರಯ್ಯಾ ಸ್ವಾಮಿ, ಚಂದ್ರಕಾಂತ ತಳವಾಡೆ, ಅಕ್ಷಯಕುಮಾರ ಮುದ್ದಾ, ಸಂತೋಷ ಬಿಜಿ.ಪಾಟೀಲ, ಜಯರಾಜ ದಾಬಶೆಟ್ಟಿ, ಸಂತೋಷಕುಮಾರ ಚನಶೆಟ್ಟಿ, ಭದ್ರೇಶ ಸ್ವಾಮಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.