ADVERTISEMENT

ಭಾಲ್ಕಿ: 50 ಸಾವಿರ ಮೌಲ್ಯದ ನಿದ್ರಾಜಕನ ಮಾತ್ರೆ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 13:26 IST
Last Updated 24 ಸೆಪ್ಟೆಂಬರ್ 2022, 13:26 IST
ಚಿತ್ರ ಭಾಲ್ಕಿಯಲ್ಲಿ ಅಬಕಾರಿ ಪೊಲೀಸರು ಆರೋಪಿ ಖದೀರ್‌ ಅಬ್ದುಲ್‌ ಮಜೀದ್‌ ನಿಂದ ನಿರ್ಬಂಧಿತ ನಿದ್ರಾಜನಕ ವಸ್ತುವಿರುವ ಸುಮಾರು 537.240 ಗ್ರಾಂ ಟ್ರಾಮಂಡೋಲ್‌ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ
ಚಿತ್ರ ಭಾಲ್ಕಿಯಲ್ಲಿ ಅಬಕಾರಿ ಪೊಲೀಸರು ಆರೋಪಿ ಖದೀರ್‌ ಅಬ್ದುಲ್‌ ಮಜೀದ್‌ ನಿಂದ ನಿರ್ಬಂಧಿತ ನಿದ್ರಾಜನಕ ವಸ್ತುವಿರುವ ಸುಮಾರು 537.240 ಗ್ರಾಂ ಟ್ರಾಮಂಡೋಲ್‌ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ   

ಭಾಲ್ಕಿ: 50 ಸಾವಿರ ಮೌಲ್ಯದ ನಿದ್ರಾಜಕನ ಮಾತ್ರೆ ಜಪ್ತಿ ಪ್ರಜಾವಾಣಿ ವಾರ್ತೆ ಭಾಲ್ಕಿ: ಇಲ್ಲಿಯ ಖಂಡ್ರೆ ಗಲ್ಲಿಯ ನಿವಾಸಿಯಾದ ಖದೀರ್‌ ಅಬ್ದುಲ್‌ ಮಜೀದ್‌ ಅವನಿಂದ ನಿರ್ಬಂಧಿತ ನಿದ್ರಾಜನಕ ವಸ್ತುವಿರುವ ಸುಮಾರು 537.240 ಗ್ರಾಂ ಟ್ರಾಮಂಡೋಲ್‌ ಮಾತ್ರೆಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪತ್ರಾಂಕಿತ ಅಧಿಕಾರಿಯ ಉಪಸ್ಥಿತಿಯಲ್ಲಿ ಅಂಗಶೋಧನೆಗೊಳಪಡಿಸಿದಾಗ ಅವನು ಧರಿಸಿದ ಕಪ್ಪು ಬಣ್ಣದ ಜರ್ಕಿನ್ ಒಳಗೆ 84 ಸ್ಟ್ರೈಪಸ್‌ ಗಳಲ್ಲಿ ಒಟ್ಟು 672 ಕ್ಯಾಪ್ಸೂಲ್ಸ್‌ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಇಟ್ಟುಕೊಂಡಿದ್ದ ನಿದ್ರಾಜನಕ ವಸ್ತುವಿನ ಮೌಲ್ಯ ಕಾಳಸಂತೆಯಲ್ಲಿ50 ಸಾವಿರ ರೂಪಾಯಿ ಆಗಿದೆ. ಆರೋಪಿ ಖದೀರ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಇನ್ನೋರ್ವ ಆರೋಪಿ ಬೀದರ್‌ನ ಮಾಂಗರವಾಡಿಯ ವಿಕಾಸ ಈಶ್ವರ ಖಸಾಬೆ ಬಂಧನಕ್ಕೆ ಜಾಲ ಬೀಸಲಾಗಿದೆ. ಕಾರ್ಯಾಚರಣೆಯಲ್ಲಿ ನಿರೀಕ್ಷಕರಾದ ನಿಂಗನಗೌಡ ಪಾಟೀಲ, ರವೀಂದ್ರ ಪಾಟೀಲ, ಸುರೇಶ್ ಶಂಕರ ಸಿಬ್ಬಂದಿ ವೈಜಿನಾಥ, ಸುನಿಲ್‌ ಶಿಂಧೆ, ಶ್ರೀಕಾಂತ, ಶಶಿಕಾಂತ, ವೆಂಕಟೇಶ ಸೋನೊನೆ ಭಾಗವಹಿಸಿದ್ದರು ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.