
ಭೀಮಣ್ಣ ಖಂಡ್ರೆ ಒಬ್ಬ ಹೋರಾಟಗಾರರು. ಅವರು ಅನ್ಯಾಯದ ವಿರುದ್ಧ ಹೋರಾಡಿದ್ದರು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು. ಹೈದರಾಬಾದ್ ಕರ್ನಾಟಕ ವಿಮೋಚನಾ ವಳವಳಿ, ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅವರೊಬ್ಬ ಜನಪರವದ ಹೋರಾಟಗಾರರಾಗಿದ್ದರು. ನ್ಯಾಯದ ಪರ ಹೋರಾಟ ಮಾಡಿದ್ದರು. ಬೀದರ್ ಕರ್ನಾಟಕದಲ್ಲಿ ಉಳಿಯಲು ಅವರ ಏಕೀಕರಣ ಹೋರಾಟದ ಫಲ ಎಂದರು.
ಬರೀ ಅವರು ರಾಜಕಾರಣಿ ಆಗಿರಲಿಲ್ಲ. ಸಮಾಜ ಸೇವಕರಾಗಿ,ಎಲದಲ ವರ್ಗದ ಜನರನ್ನು ಪ್ರತಿನಿಧಿಸುವ ಛಾತಿ ಅವರಲ್ಲಿತ್ತು. ದೀರ್ಘಕಾಲ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿದ್ದರು. ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡಿದ್ದರು. ಅವರು ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಹೊಂದಿದ್ದರು. ಜೀವನದುದ್ದಕ್ಕೂ ಸಮಾಜವಾದಿಯಾಗಿ ಬದುಕಿದ್ದರು. ಸರಳ ಜೀವನ ನಡೆಸಿದ್ದರು. ನಿಷ್ಠುರ, ಖಂಡಿತವಾದಿ , ಮುಲಾಜಿಲ್ಲದೇ ಹೇಳುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.ಆದರೂ ಅಜಾತಶತ್ರು. ರೈತರು, ಸಹಕಾರಿ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ.
ಲೋಕೋಪಯೋಗಿ, ನೀರಾವರಿ, ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ನಾನು ಕೂಡ ಶತಮಾನೋತ್ಸವದಲ್ಲಿ ಭಾಗವಹಿಸಿದ್ದೆ. ಅವರು ಎಲ್ಲರಿಗೂ ಸ್ಫೂರ್ತಿ. ಅವರ ಮಾರ್ಗದರ್ಶನ ಎಲ್ಲ ಯುವಕರಿಗೆ ದಾರಿದೀಪ. ಸಮಾಜಮುಖಿಯಾದ ಜೀವನ ನಡೆಸಿದ್ದರು. ಜೀವನದ ಸಾರ್ಥಕ ಬಹಳ ಮುಖ್ಯ. ಆಕಸ್ಮಿಕ ಜನನ, ಹುಟ್ಟು ಖಚಿತ. ಮಧ್ಯದ ಬದುಕು ಸಾರ್ಥಕವಾಗಿರಬೇಕು. ಅಂತಹ ಸಾರ್ಥಕ ಬದುಕು ಖಂಡ್ರೆ ಅವರದ್ದಾಗಿತ್ತು. ಅವರ ಸಾವಿನ ದುಃಖ ಕುಟುಂಬದವರು, ಅಭಿಮಾನಿಗಳಿಗೆ ಭರಿಸುವ ಶಕ್ತಿ ಭಗವಂತ ಕೊಡಲೆಂದು ಪ್ರಾರ್ಥಿಸುವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.