ADVERTISEMENT

ಬೀದರ್‌ | ಕುಡಿದ ಅಮಲಿನಲ್ಲಿ ಮಾಂಜ್ರಾ ನದಿಗೆ ಹಾರಿ ಪ್ರಾಣ ಬಿಟ್ಟ ಯುವಕ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 9:48 IST
Last Updated 12 ಸೆಪ್ಟೆಂಬರ್ 2025, 9:48 IST
<div class="paragraphs"><p>ಪ್ರಭಾಕರ್‌ ಸುಭಾಷ ಸೂರ್ಯವಂಶಿ</p></div>

ಪ್ರಭಾಕರ್‌ ಸುಭಾಷ ಸೂರ್ಯವಂಶಿ

   

ಹುಲಸೂರ (ಬೀದರ್‌ ಜಿಲ್ಲೆ): ಕುಡಿದ ಅಮಲಿನಲ್ಲಿ ಯುವಕನೊಬ್ಬ ಮಾಂಜ್ರಾ ನದಿಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ತಾಲ್ಲೂಕಿನ ಹಲಸಿ ತೂಗಾಂವ್‌ ಗ್ರಾಮದಲ್ಲಿ ನಡೆದಿದೆ.

ಹಲಸಿ ತೂಗಾಂವ್‌ ಗ್ರಾಮದ ನಿವಾಸಿ ಪ್ರಭಾಕರ್‌ ಸುಭಾಷ ಸೂರ್ಯವಂಶಿ (38) ಮೃತ ವ್ಯಕ್ತಿ.

ADVERTISEMENT

ಸುಭಾಷ್‌ ಗುರುವಾರ ಸಂಜೆ ನದಿಗೆ ಜಿಗಿದು ಪ್ರಾಣ ತ್ಯಜಿಸಿದ್ದಾರೆ. ಅಲ್ಲೇ ಇದ್ದ ಕೆಲವರು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದರ ವಿಡಿಯೋ ಹರಿದಾಡುತ್ತಿದೆ.

ಮೆಹಕರ್‌ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಶೋಧ ಕಾರ್ಯ ನಡೆಸಿ, ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.