ADVERTISEMENT

ಬೀದರ್‌: ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:21 IST
Last Updated 15 ಸೆಪ್ಟೆಂಬರ್ 2025, 6:21 IST
<div class="paragraphs"><p>ಹುಲಸೂರ ಹೊರವಲಯದಲ್ಲಿರುವ ಮಾಂಜ್ರಾ ನದಿಯ ಪಕ್ಕದ ಜಮೀನಿನಲ್ಲಿ ನೀರು ನಿಂತಿರುವುದು</p></div>

ಹುಲಸೂರ ಹೊರವಲಯದಲ್ಲಿರುವ ಮಾಂಜ್ರಾ ನದಿಯ ಪಕ್ಕದ ಜಮೀನಿನಲ್ಲಿ ನೀರು ನಿಂತಿರುವುದು

   

ಬೀದರ್‌: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾನುವಾರ ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಯಿತು.

ಸಂಜೆ 4 ಗಂಟೆ ಸುಮಾರಿಗೆ ಆರಂಭಗೊಂಡ ಗುಡುಗು ಸಹಿತ ಜೋರು ಮಳೆ ಹೊತ್ತಾಗುವ ತನಕ ಎಡೆಬಿಡದೆ ಸುರಿಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣ ಇತ್ತು. ಇಂದಾದರೂ ಮಳೆ ಬಿಡುವು ಕೊಟ್ಟಿತಲ್ಲ ಎಂದು ಜನ ಸಮಾಧಾನಪಟ್ಟಿದ್ದರು. ಆದರೆ, ಸಂಜೆ ಪುನಃ ಜೋರು ಮಳೆಯಾಯಿತು. 

ADVERTISEMENT

ಸತತ ಐದನೇ ದಿನವೂ ಮಳೆಯಾದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತು. ಬೀದರ್‌ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲೂ ವರ್ಷಧಾರೆಯಾಗಿದೆ.

ಗುಡುಗು ಸಹಿತ ಮಳೆ

ಹುಲಸೂರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ದಿನವಿಡೀ ಜಿಟಿ ಜಿಟಿ ಮಳೆ ಸುರಿದಿದೆ.

ಹುಲಸೂರ, ಮಿರಕಲ, ಗಡಿಗೌಡಗಾಂವ, ವಾಂಝರಖೆಡ್, ಮೇಹಕರ ಸೇರಿದಂತೆ ಇತರೆಡೆ ಅರ್ಧ ತಾಸು ಸಿಡಿಲು ಸಹಿತ ಜೋರಾದ ಮಳೆ ಸುರಿದಿದೆ. ಬೇಲೂರ, ಗೋರಟಾ, ಮುಚಳಂಬ ಸೇರಿದಂತೆ ಇತರೆಡೆ ಜಿಟಿ ಜಿಟಿ ಮಳೆ ಸುರಿದಿದೆ.

ಇಲ್ಲಿವರೆಗೂ ಬಿದ್ದ ಮಳೆಯಿಂದ ಯಾವುದೇ ಜೀವ ಹಾನಿ ಆಗಿಲ್ಲ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.