ADVERTISEMENT

ಬೀದರ್: ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 13:23 IST
Last Updated 10 ಜೂನ್ 2020, 13:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಸವಕಲ್ಯಾಣ: ಸ್ಪೃಶ್ಯ ಜಾತಿಗಳಾದ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಅಸ್ಪೃಶ್ಯ ಜಾತಿ ಸಮನ್ವಯ ಸಮಿತಿ ಪದಾಧಿಕಾರಿಗಳು ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಈಚೆಗೆ ಉಪ ವಿಭಾಗಾಧಿಕಾರಿ ಭಂವರಸಿಂಗ್ ಮೀನಾ ಅವರಿಗೆ ಸಲ್ಲಿಸಿದರು.

ಈಚೆಗೆ ಈ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡುವ ಕುರಿತು ಪರಿಶೀಲಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ‌ತಕ್ಷಣ ಸರ್ಕಾರ ಈ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.

ಸಮಿತಿ ಅಧ್ಯಕ್ಷ ಮನೋಹರ ಮೈಸೆ, ಗೌರವ ಅಧ್ಯಕ್ಷ ನಾಗನಾಥ ವಾಡೇಕರ್, ಉಪಾಧ್ಯಕ್ಷ ಸಂಜೀವ ಸಂಗನೂರೆ, ಸೂರ್ಯಕಾಂತ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಸುರೇಶ ಮೋರೆ, ಇತರೆ ಪದಾಧಿಕಾರಿಗಳಾದ ಮಾರುತಿ ಲಾಡೆ, ಮನೋಹರ ಮೋರೆ, ವಿಠಲರಾವ್ ಗೋಖಲೆ, ಮನೋಜ ಮುಡಬಿಕರ್, ನೀಲಕಂಠ ಭೆಂಡೆ, ಬಾಬುರಾವ್ ಮದಲವಾಡಾ, ಶಿರೋಮಣಿ ನೀಲನೋರ್, ರಾಮ ಗೋಡಬೋಲೆ, ಧೂಳಪ್ಪ ಪೊಸ್ತಾರ, ಅಶೋಕ ಸಂಗನೂರೆ, ದತ್ತು ಲಾಡೆ ಹಾಗೂ ಗುಲಾಬರಾವ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.