ADVERTISEMENT

ಕಾರ್ಮಿಕರ ಕೈಬಿಡದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 2:49 IST
Last Updated 30 ಜೂನ್ 2022, 2:49 IST
ಬಸವಕಲ್ಯಾಣದಲ್ಲಿ ಬ್ರಿಮ್ಸ್ ಆಸ್ಪತ್ರೆ ಕಾರ್ಮಿಕರನ್ನು ಕೈಬಿಡದಿರಲು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು
ಬಸವಕಲ್ಯಾಣದಲ್ಲಿ ಬ್ರಿಮ್ಸ್ ಆಸ್ಪತ್ರೆ ಕಾರ್ಮಿಕರನ್ನು ಕೈಬಿಡದಿರಲು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು   

ಬಸವಕಲ್ಯಾಣ: ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕರನ್ನು ಕೈಬಿಡದಿರಲು ಆಗ್ರಹಿಸಿ ಬುಧವಾರ ದಲಿತ ರಕ್ಷಣಾ ವೇದಿಕೆಯಿಂದ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಎರಡು ವರ್ಷಗಳಿಂದ 96 ಸ್ವಚ್ಛತಾ ಕಾರ್ಮಿಕರು ಸೇವೆ ಸಲ್ಲಿಸಿದ್ದರು. ಅಂಥವರಿಗೆ ದಿಢೀರನೆ ಕೆಲಸಕ್ಕೆ ಬರಬೇಡಿ ಎಂದು ಹೇಳಲಾಗಿದೆ. ಆದ್ದರಿಂದ ಇವರ ಕುಟುಂಬ ನಿರ್ವಹಣೆಗೆ ತೊಂದರೆ ಆಗಿದೆ. ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾರಣ ಅವರನ್ನು ಕೆಲಸಕ್ಕೆ ಪುನಃ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಸಿಕಂದರ್ ಶಿಂಧೆ, ಉಪಾಧ್ಯಕ್ಷ ಅಶೋಕ ಮದಾಳೆ, ಕಾರ್ಯದರ್ಶಿ ಪಿಂಟು ಕಾಂಬಳೆ, ಹಿರಿಯ ಮುಖಂಡ ಸುರೇಶ ಮೋರೆ, ಗೌತಮ ಕಾಂಬಳೆ, ಮಹಾದೇವ ಗಾಯಕವಾಡ ಹಾಗೂ ಗೌತಮ ಜ್ಯಾಂತೆ, ರಾವಣ ಮೇತ್ರೆ, ಬಸವರಾಜ ರಾಧು, ಲಕ್ಷ್ಮಣರಾವ್ ಸಸ್ತಾಪುರೆ ಹಾಗೂ ಪ್ರಶಾಂತ ಶಿಂಧೆ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.