ADVERTISEMENT

ಬೀದರ್: ಸೋಲಪುರದಲ್ಲಿ ಬುತ್ತಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 14:41 IST
Last Updated 16 ಜುಲೈ 2021, 14:41 IST
ಬೀದರ್ ತಾಲ್ಲೂಕಿನ ಸೋಲಪುರದಲ್ಲಿ ನಡೆದ ಬುತ್ತಿ ಜಾತ್ರೆಯಲ್ಲಿ ಸೇರಿದ್ದ ಜನ
ಬೀದರ್ ತಾಲ್ಲೂಕಿನ ಸೋಲಪುರದಲ್ಲಿ ನಡೆದ ಬುತ್ತಿ ಜಾತ್ರೆಯಲ್ಲಿ ಸೇರಿದ್ದ ಜನ   

ಜನವಾಡ: ಬೀದರ್ ತಾಲ್ಲೂಕಿನ ಸೋಲಪುರದಲ್ಲಿ ಸಾಂಪ್ರದಾಯಿಕ ಬುತ್ತಿ ಜಾತ್ರೆ ನಡೆಯಿತು.

ಗ್ರಾಮಸ್ಥರು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಒಂದೆಡೆ ಸೇರಿ ಊಟ ಮಾಡಿದರು. ಕಬಡ್ಡಿ, ಕೊಕ್ಕೋ ಸ್ಪರ್ಧೆ, ಕುದರೆ ಕುಣಿತ, ಜಾನಪದ ಗೀತೆ ಗಾಯನ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ವೀರಶೆಟ್ಟಿ ಪಾಟೀಲ, ರಾಜಕುಮಾರ ಚಿಲಮೆನೋರ, ಸಂಜು ಮಲಕನೋರ, ಜಗನ್ನಾಥ, ಬಸವಾ ಬಿರಾದಾರ, ನಸರಪ್ಪ ಜಟನೋರ, ಮಂಜುನಾಥ ಮಲಕನೋರ, ಮಲ್ಲಿಕಾರ್ಜುನ ಮಲಕನೋರ, ಶ್ರೀಕಾಂತ ಸ್ವಾಮಿ ಸೋಲಪುರ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.