ಕಮಲನಗರ: ಬಸವ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಯಿತು. ಬೈಕ್ ರ‍್ಯಾಲಿಗೆ ಪಿಡಿಒ ರಾಜಕುಮಾರ ತಂಬಾಕೆ ಚಾಲನೆ ನೀಡಿದರು.
ಪಟ್ಟಣದ ಬಸವೇಶ್ವರ ಮಂದಿರದಿಂದ ಆರಂಭವಾದ ಬೈಕ್ ರ‍್ಯಾಲಿ ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಹನುಮಾನ ಮಂದಿರ, ಅಲ್ಲಮಪ್ರಭು ವೃತ್ತ, ಶನಿಮಹಾತ್ಮ ಮಂದಿರ, ಮಹಾರಾಷ್ಟ್ರದ ಗಡಿಯಿಂದ ಸಾಗಿ ಪ್ರವಾಸಿ ಮಂದಿರ, ಶಿವಾಜಿ ವೃತ್ತ, ಅಕ್ಕಮಹಾದೇವಿ ವೃತ್ತದಿಂದ ಬಸವೇಶ್ವರ ಮಂದಿರಕ್ಕೆ ಬಂದು ಕೊನೆಗೊಂಡಿತು. ರ‍್ಯಾಲಿಯುದ್ದಕ್ಕೂ ವಿಶ್ವಗುರು ಬಸವಣ್ಣನಿಗೆ ಜಯವಾಗಲಿ ಎಂಬ ಘೋಷಣೆ ಕೂಗಲಾಯಿತು.
ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಶಿವಣಕರ್, ಉಪಾಧ್ಯಕ್ಷ ಚಂದ್ರಕಾಂತ ಸಂಗಮೆ, ಅಜೀತ ರಾಗಾ, ಹಾವಗೀರಾವ ಟೊಣ್ಣೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಕುಮಾರ ಝುಲ್ಪೆ, ಸಂತೋಷ ಸೊಲ್ಲಾಪುರೆ, ದಿಲೀಪ ತೊಂಡಾರೆ, ಅಮರ ಶಿವಣಕರ, ಅವಿನಾಶ ಶಿವಣಕರ, ಜೀತೇಂದ್ರ ಮಹಾಜನ, ಬಸವರಾಜ ಭವರಾ, ವೀರಶೆಟ್ಟಿ ಮಹಾಜನ, ಶಶಿಕಾಂತ ಮಹಾಜನ, ಸಿದ್ಧು ವಡ್ಡೆ, ಶೈಲೇಶ ಶಿವಣಕರ, ಉಮಾಕಾಂತ ಮಹಾಜನ, ಚಂದ್ರಕಾಂತ ಭೈರೆ, ಶಿವಕುಮಾರ ಪಾಟೀಲ್, ಸಂತೋಷ ಸುಲಾಕೆ, ಗುರು ಶಿವಣಕರ, ಪ್ರವೀಣ ಪಾಟೀಲ್, ಶಿವಾನಂದ ವಡ್ಡೆ, ಲಿಂಗಾನಂದ ಮಹಾಜನ್, ನಾಗೇಶ ಪತ್ರೆ, ಶಿವಶರಣಪ್ಪ ಚಿಕಮುರ್ಗೆ, ಪಪ್ಪು ಬಿರಾದಾರ, ಅನೀಲ ಬಿರಾದಾರ, ಮಹಾದೇವ ಬಿರಾದಾರ, ಶರಣಕುಮಾರ ಸುಲಾಕೆ ಹಾಗೂ ಅನೇಕ ಯುವಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.