ಬೀದರ್: ಸರಣಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಒಡ್ಡಿರುವ ಎರಡು ಇಮೇಲ್‌ಗಳು ಬಂದಿರುವುದರಿಂದ ನಗರದ ಗುರುದ್ವಾರ ನಾನಕ ಝೀರಾದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಗುರುದ್ವಾರದ ಮುಖ್ಯ ಪ್ರವೇಶ ದ್ವಾರದಲ್ಲಿ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿ ಒಳಗೆ ಬಿಡಲಾಗುತ್ತಿದೆ. ಗುರುದ್ವಾರ ಎದುರಿನ ಮುಖ್ಯದ್ವಾರದಿಂದ ಈ ಹಿಂದೆ ವಾಹನಗಳು ಸಂಚರಿಸುತ್ತಿದ್ದವು. ಈಗ ಅದನ್ನು ನಿರ್ಬಂಧಿಸಲಾಗಿದ್ದು, ದೂರದ ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿದೆ.
ಭಕ್ತರು ಗುರುದ್ವಾರಕ್ಕೆ ಮುಖ್ಯ ದ್ವಾರದ ಮೂಲಕವೇ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇತರೆ ಮಾರ್ಗಗಳಲ್ಲಿ ಭಕ್ತರ ಓಡಾಟ ನಿರ್ಬಂಧಿಸಲಾಗಿದೆ. ಗುರುದ್ವಾರ ಪ್ರಬಂಧಕ ಕಮಿಟಿಯವರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಜಿಲ್ಲಾ ಪೊಲೀಸರಿಂದಲೂ ಭದ್ರತೆ ಕಲ್ಪಿಸಲಾಗಿದೆ.
ಜುಲೈ 18 ಹಾಗೂ 20ರಂದು ಬೆದರಿಕೆಯ ಇಮೇಲ್ ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.