ADVERTISEMENT

ಮಾನವೀಯ ಸಂಬಂಧದಿಂದ ಸಾಮಾಜಿಕ ನೆಮ್ಮದಿ: ಭೀಮ ನೀಲಕಂಠರಾವ ಹಂಗರಗೆ

‘ಹೊಳೆಸಮದ್ರ ಗ್ರಾಮ ಚರಿತ್ರೆ ಮಾಲಿಕೆ’ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 3:12 IST
Last Updated 6 ಮಾರ್ಚ್ 2021, 3:12 IST
ಕಮಲನಗರ ತಾಲ್ಲೂಕಿನ ಹೊಳಸಮುದ್ರ ಗ್ರಾಮದ ಸಂತ ಹರಿನಾಥ ಮಹಾರಾಜರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವದಲ್ಲಿ ಗಣ್ಯರು ಸಾಹಿತಿ ಸಂಗಮೇಶ ಮುರ್ಕೆ ಅವರು ಬರೆದ ಹೊಳೆಸಮುದ್ರ ಗ್ರಾಮ ಚರಿತ್ರೆ ಮಾಲಿಕೆ ಕೃತಿ ಡಾ. ಬಸವಲಿಂಗ ಪಟ್ಟದ್ದೇವರು ಬಿಡುಗಡೆಗೊಳಿಸಿದರು.
ಕಮಲನಗರ ತಾಲ್ಲೂಕಿನ ಹೊಳಸಮುದ್ರ ಗ್ರಾಮದ ಸಂತ ಹರಿನಾಥ ಮಹಾರಾಜರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವದಲ್ಲಿ ಗಣ್ಯರು ಸಾಹಿತಿ ಸಂಗಮೇಶ ಮುರ್ಕೆ ಅವರು ಬರೆದ ಹೊಳೆಸಮುದ್ರ ಗ್ರಾಮ ಚರಿತ್ರೆ ಮಾಲಿಕೆ ಕೃತಿ ಡಾ. ಬಸವಲಿಂಗ ಪಟ್ಟದ್ದೇವರು ಬಿಡುಗಡೆಗೊಳಿಸಿದರು.   

ಕಮಲನಗರ: ‘ಪ್ರತಿಯೊಬ್ಬರೂ ಎಲ್ಲರ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಾಗ, ಇಡೀ ಮನುಕುಲ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದು ಸಾಮಾಜಿಕ ಕಾರ್ಯಕರ್ತ ಭೀಮ ನೀಲಕಂಠರಾವ ಹಂಗರಗೆ ತಿಳಿಸಿದರು.

ತಾಲ್ಲೂಕಿನ ಹೊಳಸಮುದ್ರ ಗ್ರಾಮದ ಸಂತ ಹರಿನಾಥ ಮಹಾರಾಜರ ದೇವಸ್ಥಾನದಲ್ಲಿ ಬುಧವಾರ ಭೀಮ ನೀಲಕಂಠರಾವ ಹಂಗರಗೆ ನೇತೃತ್ವದಲ್ಲಿ ಕನ್ನಡ ಜಾಗೃತಿ ಸಮಾವೇಶ, ಕೃತಿ ಬಿಡುಗಡೆ ಹಾಗೂ ಕಮಲನಗರ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಮಾನವೀಯ ಸಂಬಂಧ ದೂರವಾಗುತ್ತಿದೆ. ಹರೆಯದ ಮಕ್ಕಳು ತಮ್ಮ ತಾಯಿ ತಂದೆಯರನ್ನು ತಾತ್ಸಾರ ಮಾಡಿ ವೃದ್ದಾಶ್ರಮಕ್ಕೆ ಸೇರಿಸುತ್ತಿರುವ ಕೆಟ್ಟ ಬೆಳವಣಿಗೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಾಹಿತಿ ಸಂಗಮೇಶ ಮುರ್ಕೆ ಅವರ ‘ಹೊಳಸಮುದ್ರ ಗ್ರಾಮ ಚರಿತ್ರೆ’ ಕೃತಿಯನ್ನು ಭಾಲ್ಕಿ ಡಾ. ಬಸವಲಿಂಗ ಪಟ್ಟದ್ದೇವರು ಲೋಕಾರ್ಪಣೆ ಮಾಡಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಹೊಳಸಮುದ್ರ ಗ್ರಾಮ ಚರಿತ್ರೆ ಕೃತಿಯು ಇಡೀ ರಾಜ್ಯ, ದೇಶದಲ್ಲಿ ಹೋಳಸಮುದ್ರ ಗ್ರಾಮದ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಎಲ್ಲರೂ ಅವರು ಬರೆದ ಪುಸ್ತಕವನ್ನು ಓದಿ ಹೊಳಸಮುದ್ರ ಗ್ರಾಮದ ಇತಿಹಾಸ ತಿಳಿದುಕೊಳ್ಳಬೇಕು’ ಎಂದರು.

ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಗುರುವಿನ ಬಳಿ ಶಿಷ್ಯನಾಗಿ ಬಂದವನು ಗುರುವಿನ ಸಹವಾಸದಿಂದ ಒಬ್ಬ ಶ್ರೇಷ್ಠ ಗುರುವಾಗುತ್ತಾನೆ. ಗುರುವಿನ ಮಾರ್ಗದರ್ಶನದಲ್ಲಿ ಜ್ಞಾನ ಸಂಪಾದಿಸಬೇಕು’ ಎಂದರು.

ಹಿರೇಮಠ ಮಠದ ಮಹಾಲಿಂಗ ದೇವರು, ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ, ಪೂಜಾರಿ ಪ್ರವೀಣ ಮಹಾರಾಜ, ವಿಜಯಕುಮಾರ ಗೌರೆ, ಬಂಟಿ ರಾಂಪೂರೆ, ಮಹಾದೇವ ಬೆಲ್ಲೆ, ಗೋಪಾಳರಾವ ಪಾಟೀಲ್, ವಿಷ್ಣು ನುದನೂರೆ, ರಾಹುಲ ಪಾಟೀಲ, ರಾಮ ಕದಂ, ಗೋಪಾಳರಾವ, ಶಿವಾನಂದ ಪಾಟೀಲ, ದಿಲೀಪ ಕೊಂಡೆ, ಬಸವರಾಜ ಪಾಟೀಲ, ವಿಜಯಕುಮಾರ ನುದನೂರೆ, ಲಕ್ಷ್ಮಣ ಕದಂ, ಸಾಹಿತಿ ಸಂಗಮೇಶ ಮುರ್ಕೆ, ಮಹಾದೇವ ಮಡಿವಾಳ ಭೀಮ ನೀಲಕಂಠರಾವ ಹಂಗರಗೆ ಇದ್ದರು.

ಕನ್ನಡ ಸಮಾವೇಶದಲ್ಲಿ ಭೀಮ ನೀಲಕಂಠರಾವ ಹಂಗರಗೆ ನೇತೃತ್ವದಲ್ಲಿ ಕಮಲನಗರ ತಾಲ್ಲೂಕಿನ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.