ADVERTISEMENT

ಸೃಜನಶೀಲ ಬರವಣಿಗೆ ಅಗತ್ಯ: ಯುವ ಸಾಹಿತಿ ನಾಗಯ್ಯ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 7:43 IST
Last Updated 14 ಆಗಸ್ಟ್ 2021, 7:43 IST
ಬೀದರ್‌ನ ಹೋಟೆಲ್ ಮಯೂರಾದಲ್ಲಿ ನಡೆದ ಸಿರಿಗನ್ನಡ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಜಗದೀಶ ಪಾಟೀಲ ಅವರ ‘ರೂಪಾಂತರಾಳ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಸಾಹಿತಿ ಭಾರತಿ ವಸ್ತ್ರದ್ ಉದ್ಘಾಟಿಸಿದರು
ಬೀದರ್‌ನ ಹೋಟೆಲ್ ಮಯೂರಾದಲ್ಲಿ ನಡೆದ ಸಿರಿಗನ್ನಡ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಜಗದೀಶ ಪಾಟೀಲ ಅವರ ‘ರೂಪಾಂತರಾಳ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಸಾಹಿತಿ ಭಾರತಿ ವಸ್ತ್ರದ್ ಉದ್ಘಾಟಿಸಿದರು   

ಬೀದರ್: ಸಾಹಿತ್ಯದ ಗಟ್ಟಿತನಕ್ಕೆ ಸೃಜನಶೀಲ ಬರವಣಿಗೆ ಅಗತ್ಯ ಎಂದು ಯುವ ಸಾಹಿತಿ ನಾಗಯ್ಯ ಸ್ವಾಮಿ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣ ಎದುರಿನ ಹೋಟೆಲ್ ಮಯೂರಾದಲ್ಲಿ ಆಯೋಜಿಸಿದ್ದ ಸಿರಿಗನ್ನಡ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಜಗದೀಶ ಪಾಟೀಲ ಅವರ ‘ರೂಪಾಂತರಾಳ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬರಹಗಾರರು ಹಿರಿಯ ಸಾಹಿತಿಗಳು ಹಾಗೂ ಚಿಂತಕರ ಮಾರ್ಗದರ್ಶನ ಪಡೆಯಬೇಕು ಎಂದು
ತಿಳಿಸಿದರು.

ADVERTISEMENT

ರೂಪಾ ಅವರು ತಮ್ಮ ಚೊಚ್ಚಲ ಕೃತಿ ರೂಪಾಂತರಾಳದಲ್ಲಿ ತಮ್ಮ ಭಾವನೆಗಳನ್ನು ಕಾವ್ಯದ ರೂಪದಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ ಎಂದರು.

ಹಿರಿಯ ಲೇಖಕಿಯರಾದ ಭಾರತಿ ವಸ್ತ್ರದ, ರಾಚಮ್ಮ ಮಾಣಿಕರಾವ್ ಪಾಟೀಲ, ರೂಪಾ ಪಾಟೀಲ, ರಮೇಶ ಬಿರಾದಾರ, ಮಚ್ಚೇಂದ್ರ ಅಣಕಲ್ ಮಾತನಾಡಿದರು.

ಸಾಹಿತಿ ಎಂ.ಜಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಸಾಹಿತಿ ಶಿವಕುಮಾರ ಕಟ್ಟೆ, ಜಗದೀಶ ಪಾಟೀಲ, ಪಾರ್ವತಿ ಸೋನಾರೆ, ಅರವಿಂದ ಕುಲಕರ್ಣಿ, ಶಂಭುಲಿಂಗ ವಾಲ್ದೊಡ್ಡಿ, ಸಿ.ಎಸ್. ಫುಲೇಕರ್, ಡಾ. ಸಿ. ಆನಂದರಾವ್, ಧೋಂಡಿರಾಮ ಚಾಂದಿವಾಲೆ, ವಿಜಯಕುಮಾರ ಸೋನಾರೆ ಇದ್ದರು.

ಶ್ರೇಯಾ ಮಹೇಂದ್ರಕರ್ ನಿರೂಪಿಸಿದರು. ಜ್ಯೋತಿ ಫುಲೇಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.