ADVERTISEMENT

ಬೀದರ್ | ಜಿಲ್ಲೆಯ ವಿವಿಧೆಡೆ ಸಂಭ್ರಮದ ಡಾ. ಅಂಬೇಡ್ಕರ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 14:05 IST
Last Updated 14 ಏಪ್ರಿಲ್ 2022, 14:05 IST
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೀದರ್‌ನ ಶ್ರೀ ಸಾಯಿ ಚೈತನ್ಯ ಪದವಿ ಕಾಲೇಜಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೀದರ್‌ನ ಶ್ರೀ ಸಾಯಿ ಚೈತನ್ಯ ಪದವಿ ಕಾಲೇಜಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು   

ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ಹಿಮಾಲಯ ಕಾನ್ವೆಂಟ್ ಶಾಲೆ:ನಗರದ ಹಿಮಾಲಯ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ ಮಾತನಾಡಿದರು.

ಶಾಲೆ ಮುಖ್ಯ ಶಿಕ್ಷಕ ಅನಂತ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಮಿಸ್ ರೈಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾದ್ರಕ್ ಸೋನಕಾಂಬಳೆ, ಶಿಕ್ಷಕರಾದ ಧನರಾಜ, ವಿದ್ಯಾ, ಸುಧಾ ಇದ್ದರು. ಶಿವಕುಮಾರ ಕುಂಬಾರ್ ಸ್ವಾಗತಿಸಿದರು. ಜಯಪ್ರಕಾಶ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.

ತೋಟಗಾರಿಕೆ ಕಾಲೇಜು:ನಗರದ ತೋಟಗಾರಿಕೆ ಕಾಲೇಜಿನಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ADVERTISEMENT

ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಡೀನ್ ಡಾ. ಎಸ್.ವಿ. ಪಾಟೀಲ ಮಾತನಾಡಿದರು. ಸರ್ಕಾರಿ ಔದ್ಯೋಗಿಕ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಜನವಾಡಕರ್, ಸಿಬ್ಬಂದಿ ಸಲಹೆಗಾರ ಡಾ, ಮಹಮ್ಮದ್ ಫಾರೂಕ್, ಪ್ರಾಧ್ಯಾಪಕರಾದ ಡಾ. ಅಶೋಕ ಸೂರ್ಯವಂಶಿ, ಅರ್ಜುನ ಬಿ. ಭಂಡಾರೆ ಇದ್ದರು.

ಸಕ್ಲೈನ್ ನಿರೂಪಿಸಿದರು. ಅಂಬಿಕಾ ಸ್ವಾಗತಿಸಿದರು. ನವ್ಯಶ್ರೀ ವಂದಿಸಿದರು.

ಅಂಬಿಗರ ಚೌಡಯ್ಯ ಸೇನೆ:ನಗರದ ಅಂಬಿಗರ ಚೌಡಯ್ಯ ಯುವ ಸೇನೆ ಕೇಂದ್ರ ಕಚೇರಿಯಲ್ಲಿ ಚಂದ್ರಶೇಖರ ಆಜಾದ್ ಯುವ ಸಂಘದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಅವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ್ ಭಾವಿಕಟ್ಟಿ, ಚಂದ್ರಶೇಖರ ಆಜಾದ್ ಯುವ ಸಂಘದ ಅಧ್ಯಕ್ಷ ವಿಜಯಕುಮಾರ ಭಂಡೆ, ಪ್ರಮುಖರಾದ ವಿಜಯಕುಮಾರ ಅಷ್ಟೂರೆ, ಚಂದ್ರಕಾಂತ ಹಳ್ಳಿಖೇಡಕರ್, ಕಿರಣ ತಾಂಡೂಲಕರ್, ಡೇವಿಡ್ ಕೆಂಪೆ, ಗೌತಮ ನಿಜಾಂಪುರೆ, ಅನಿಲಕುಮಾರ ಇದ್ದರು.

ಚಿಮಕೋಡ್:ತಾಲ್ಲೂಕಿನ ಚಿಮಕೋಡ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೂರ್ಯಕಾಂತ ಪಾಟೀಲ ಅವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು. ನಿರ್ದೇಶಕರಾದ ಸುರೇಶ ಪಾಟೀಲ, ಸಂಗನಬಸಪ್ಪ ಪಸಾರಗೆ, ಮಾರುತಿ ಶಿವಬಾರೆ, ಕಾರ್ಯದರ್ಶಿ ಸಂಗಪ್ಪ, ಪ್ರಮುಖರಾದ ಸೋಮನಾಥ ಕಂದಗೂಳೆ, ಶ್ರೀಕಾಂತ ಬಿರಾದಾರ, ಮಲ್ಲಶೆಟ್ಟಿ ಡೆಂಪೆ, ಸಂತೋಷ ಸುಲ್ತಾನಪುರೆ, ಸಿದ್ದು, ಶಿವಕುಮಾರ, ಸವಿತಾ ಬಿರಾದಾರ ಉಪಸ್ಥಿತರಿದ್ದರು.

ಪಶು ವಿವಿ:ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ.ವಿ. ಶಿವಪ್ರಕಾಶ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.

ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ಯಾಮಸುಂದರ ಎಂ. ಖಾನಾಪೂರಕರ್, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ದಿಲೀಪಕುಮಾರ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ವೈಭವ ಮುನೇಶ್ವರ, ನಾಂದೇಡ್‍ನ ಡಾ.ಎಂ.ಕೆ. ತಾಂದಳೆ, ಸುಭಾಷ ಹೊಸರು, ಡಾ. ಬಸವರಾಜ ಅವಟಿ, ಡಾ. ಆರ್.ಜಿ. ಬಿಜೂರಕರ್, ಡಾ. ಯು.ಎಸ್. ಜಾಧವ್, ಡಾ. ಎಂ.ಡಿ. ಸುರಣಗಿ, ರಾಮಪ್ಪ ಕೋರವಾರ, ಡಾ. ಕೃಷ್ಣಮೂರ್ತಿ ಸಿ.ಎಂ., ಡಾ. ವಿದ್ಯಾಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.