ADVERTISEMENT

ಬೀದರ್: ‘ಬುಡಾ’ ಅಧ್ಯಕ್ಷ ಸ್ಥಾನ, ಈಡೇರದ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:53 IST
Last Updated 8 ಮಾರ್ಚ್ 2024, 15:53 IST
ಸಂಗಮೇಶ ಭಾವಿದೊಡ್ಡಿ
ಸಂಗಮೇಶ ಭಾವಿದೊಡ್ಡಿ   

ಬೀದರ್: ‘ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ದಲಿತ ಸಮುದಾಯದವರಿಗೆ ನೀಡಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ಭರವಸೆ ನೀಡಿದ್ದರು. ಆದರೆ, ಅವರು ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ದಲಿತ ಯುವ ಮುಖಂಡ ಸಂಗಮೇಶ ಭಾವಿದೊಡ್ಡಿ ಆರೋಪಿಸಿದ್ದಾರೆ.

‘ದಲಿತ ಮುಖಂಡ ಬಾಬುರಾವ್ ಪಾಸ್ವಾನ್ ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಜಿಲ್ಲೆಯ ಹಿಂದುಳಿದ, ದಲಿತರ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ದಲಿತರ ಓಣಿಗಳಿಗೆ ತಿರುಗಾಡಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿಸಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪಾಸ್ವಾನ್‌ ಅವರನ್ನು ಬುಡಾ ಅಧ್ಯಕ್ಷರಾಗಿ ಮಾಡಲಾಗುವುದು ಎಂದು ಸಚಿವ ಖಾನ್‌ ಹೇಳಿದ್ದರು. ಆದರೆ, ಅವರು ಮಾತು ಉಳಿಸಿಕೊಂಡಿಲ್ಲ. ಅವರ ನಡೆಯಿಂದ ನಿರಾಸೆಯಾಗಿದೆ’ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT