ADVERTISEMENT

ನಾಗಸೇನ ಬುದ್ಧ ವಿಹಾರ: ಬುದ್ಧ ಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:02 IST
Last Updated 15 ಮೇ 2025, 14:02 IST
ಬೀದರ್‌ನ ನಾಗಸೇನ ಬುದ್ಧ ವಿಹಾರದಲ್ಲಿ ಭಗವಾನ್‌ ಬುದ್ಧನ ಹೊಸ ಮೂರ್ತಿ ಅನಾವರಣ ಮಾಡಲಾಯಿತು
ಬೀದರ್‌ನ ನಾಗಸೇನ ಬುದ್ಧ ವಿಹಾರದಲ್ಲಿ ಭಗವಾನ್‌ ಬುದ್ಧನ ಹೊಸ ಮೂರ್ತಿ ಅನಾವರಣ ಮಾಡಲಾಯಿತು   

ಬೀದರ್: ಇಲ್ಲಿಯ ನಾಗಸೇನ ನಗರದ ನಾಗಸೇನ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಆಚರಣೆಯನ್ನು ನಾಗನಾಥ ನೀಡೋದಕರ ನೇತೃತ್ವದಲ್ಲಿ ನಡೆಯಿತು.

ಬುದ್ಧ ಪೂರ್ಣಿಮೆಯ ಹಿನ್ನೆಲೆ ಭಗವಾನ ಬುದ್ಧನ ಹೊಸ ಮೂರ್ತಿ ಅನಾವರಣ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು. ಬಂದ ಭಕ್ತರಿಗೆ ಹಣ್ಣು ವಿತರಣೆ ಮಾಡಲಾಯಿತು.

ನಾಗನಾಥ ನೀಡೋದಕರ ಮಾತನಾಡಿ,‘ಬುದ್ಧನೆಂದರೆ ಬೆಳಕು, ಬುದ್ದನೆಂದರೆ ಭರವಸೆ ಬದುಕುವ ರೀತಿ, ಜೀವನ ಮೌಲ್ಯಗಳನ್ನು ತಿಳಿಸಿದ ಗೌತಮ ಬುದ್ಧರ ಸಂದೇಶಗಳು ನಮ್ಮನ್ನು ಸನ್ಮಾರ್ಗದತ್ತ ಸಾಗುವಂತೆ ಪ್ರೇರಣೆ ನೀಡುತ್ತವೆ’ ಎಂದು ಹೇಳಿದರು.

ADVERTISEMENT

ಸಾಗರ್ ದಾಂಡೇಕರ್ ಧರ್ಮ ಮತ್ತು ಭಗವಾನ ಗೌತಮ ಬುದ್ಧರ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯ ಸಾಗರ್ ಸಂಭು, ಡಾ.ಲೋಕೇಶ್, ಡಾ.ಸುಜಾತ ಹೊಸಮನಿ, ಮುಖ್ಯ ಶಿಕ್ಷಕರಾದ ಭಾಗ್ಯರತಿ, ಮಹೇಶ್ ನೀಡೋದಕರ, ಸತ್ಯಜೀತ್ ನೀಡೋದಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.