ADVERTISEMENT

ರೇಷ್ಮೆ ಇಲಾಖೆ ಅವರಣದಲ್ಲೇ ಜಿಲ್ಲಾ ಸಂರ್ಕೀಣ ನಿರ್ಮಿಸಿ

ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 14:39 IST
Last Updated 8 ಆಗಸ್ಟ್ 2021, 14:39 IST



ಬೀದರ್‌: ನೌಬಾದ್‍ ಸಮೀಪದ ರೇಷ್ಮೆ ಇಲಾಖೆಯ ಜಾಗದಲ್ಲೇ ಜಿಲ್ಲಾ ಆಡಳಿತ ಕಚೇರಿಗಳ ಸಂರ್ಕೀಣ ಮಾಡಬೇಕು ಎಂದು ಬೀದರ್ ಜಿಲ್ಲಾ ಎಸ್.ಸಿ, ಎಸ್.ಟಿ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಸಂಘ ಆಗ್ರಹಿಸಿದೆ.

ರೇಷ್ಮೆ ಇಲಾಖೆ ಕಚೇರಿ ಆವರಣದಲ್ಲಿ 55 ಎಕರೆ ಜಮಿನು ಲಭ್ಯವಿದೆ. ಜಿಲ್ಲಾ ಆಡಳಿತ ಕಚೇರಿಗಳ ಸಂರ್ಕೀಣ ನಿರ್ಮಾಣಕ್ಕೆ ಸಾಕಷ್ಟು ಜಾಗ ಇದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಆಯಾ ನಗರದ ಹೊರಗಡೆಯೇ ಜಿಲ್ಲಾಧಿಕಾರಿ ಕಚೇರಿ ಇದೆ. ಅನಗತ್ಯವಾಗಿ ವಿರೋಧಿಸುವುದು ಸರಿಯಲ್ಲ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್.ಎಸ್. ತಿಳಿಸಿದ್ದಾರೆ.

ನೌಬಾದ್‌ ಸಮೀಪ ಸಂಕೀರ್ಣ ನಿರ್ಮಿಸುವುದರಿಂದ ಕೈಗಾರಿಕೆಗಳ ಅಭಿವೃದ್ಧಿಗೆ ಅನುಕುಲವಾಗಲಿದೆ. ವಿಮಾನ ನಿಲ್ದಾಣ ಹೊರಗಡೆಯೇ ಇದೆ. ಹೊಸ ರಿಂಗ್‌ ರಸ್ತೆಗಳು ನಿರ್ಮಾಣವಾಗುತ್ತಿವೆ. ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಸೇರಿದಂತೆ ಎಲ್ಲ ತಾಲ್ಲೂಕುಗಳ ಜನರಿಗೂ ಹೋಗಿ ಬರಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ADVERTISEMENT

ರಾಜಕಾರಣಿಗಳು ನಗರಕ್ಕೆ ಆಗಮಿಸಿದಾಗ ಸಂಚಾರ ಒತ್ತಡ ಹೆಚ್ಚಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ. ನಗರದ ಹೊರಗಡೆ ಸಂಕೀರ್ಣ ಕಟ್ಟಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲಾ ನ್ಯಾಯಾಲಯ, ಬ್ಯಾಂಕ್‍, ಅಂಚೆ ಕಚೇರಿ, ತಹಶೀಲ್ದಾರ್ ಕಚೇರಿ, ನಗರಸಭೆ ಕಚೇರಿ ಬೇರೆ ಬೇರೆ ಇಲಾಖೆಗಳ ಕಚೇರಿಗಳು ಒಂದೇ ಕಡೆ ಕಡೆ ಇರುವ ಕಾರಣ ಸಂಚಾರ ಒತ್ತಡ ಹೆಚ್ಚುತ್ತಿದೆ. ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕರ ಹಿತವನ್ನು ಕಡೆಗಣಿಸಬಾರದು. ರೇಷ್ಮೆ ಇಲಾಖೆ ಅವರಣದಲ್ಲಿ ನಿರ್ಮಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.