ಜನವಾಡ: ಬೀದರ್ ತಾಲ್ಲೂಕಿನ ಜನವಾಡದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಯಮ ಬಾಹಿರವಾಗಿ ನಡೆಸುತ್ತಿರುವ ಮದ್ಯದ ಅಂಗಡಿಯ ಪರವಾನಗಿ ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕ ಒತ್ತಾಯಿಸಿದೆ.
ಯುವ ಘಟಕದ ಪದಾಧಿಕಾರಿಗಳು ಈ ಕುರಿತು ಅಬಕಾರಿ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಬೀದರ್‌ನಲ್ಲಿ ಮಂಗಳವಾರ ಅಬಕಾರಿ ಉಪ ಆಯುಕ್ತರಿಗೆ ಸಲ್ಲಿಸಿದರು.
ಮದ್ಯದ ಅಂಗಡಿ ಇರುವ ಪ್ರದೇಶದಲ್ಲಿ ಮನೆಗಳು, ಮಸೀದಿ, ಶಾಲೆಗಳು ಇವೆ. ಅಂಗಡಿಯಿಂದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯದ ಅಂಗಡಿಯ ಪರವಾನಗಿ ರದ್ದುಪಡಿಸಬೇಕು. ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಾ ಫರೀದ್ ಉಲ್ಲಾ ಖಾನ್, ಪ್ರಮುಖರಾದ ಶೇರಖಾನ್, ಶಮಶೀರ್‌ಖಾನ್, ಕೃಷ್ಣ ಅಶೋಕ ಹುಪಳೆ, ಇಸ್ಮಾಯಿಲ್ ಇಮ್ಜಾದ್ ಅಲಿ ಜಮಾದಾರ್, ರಹೀಮ್ ಅತ್ತಾರ್, ಆರಿಫ್, ಸಲೀಮ್, ರಫಿ ಪಟೇಲ್, ಜೈರಾಜ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.