ಸಾವು
(ಸಾಂದರ್ಭಿಕ ಚಿತ್ರ)
ಭಾಲ್ಕಿ: ಪಟ್ಟಣದ ರೈಲು ನಿಲ್ದಾಣ ಸಮೀಪದ ಪಂಚಶೀಲ ನಗರದ ರಸ್ತೆ ಪಕ್ಕ ನಿಂತಿದ್ದ ದಂಪತಿಗೆ ವೇಗವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಆರತಿ ಗೌತಮ ವಾಗಮಾರೆ (40) ಮೃತಪಟ್ಟಿದ್ದಾರೆ.
ಜುಲೈ 21 ರಂದು ಘಟನೆ ನಡೆದಿದೆ.
‘ನಾನು ನನ್ನ ಹೆಂಡತಿ ಆರತಿ ಮನೆಗೆ ತೆರಳಲು ರಸ್ತೆ ಪಕ್ಕ ನಿಂತಿದ್ದಾಗ ಬೀದರ್ ಕಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಟಯೋಟಾ ಇಟಿಯೋಸ್ ಕಾರ್ ನಮಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಲ್ಲಿ ಗಾಯಗೊಂಡ ನಾನು ನನ್ನ ಹೆಂಡತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನನ್ನ ಹೆಂಡತಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಳೆ ಎಂದು ತಿಳಿಸಿದರು’ ಎಂದು ಮೃತಳ ಗಂಡ ಗೌತಮ್ ನೀಡಿರುವ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.