ADVERTISEMENT

ಗರ್ಭಕೋಶ ಕ್ಯಾನ್ಸರ್ ತಡೆ ಲಸಿಕೆ ಉಚಿತ ಕೊಡಲಿ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ. ಸಿ. ಆನಂದರಾವ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 13:46 IST
Last Updated 3 ಜುಲೈ 2022, 13:46 IST
ಬೀದರ್‌ನ ಭಾರತೀಯ ಕುಟುಂಬ ಯೋಜನಾ ಸಂಘದ ಸಭಾಂಗಣದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು
ಬೀದರ್‌ನ ಭಾರತೀಯ ಕುಟುಂಬ ಯೋಜನಾ ಸಂಘದ ಸಭಾಂಗಣದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು   

ಬೀದರ್: ಸರ್ಕಾರ ಹದಿಹರೆಯದ ಹೆಣ್ಣುಮಕ್ಕಳಿಗೆ ಗರ್ಭಕೋಶ ಕ್ಯಾನ್ಸರ್ ತಡೆ ಲಸಿಕೆ ಉಚಿತವಾಗಿ ಕೊಡಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ್ ಘಟಕದ ಅಧ್ಯಕ್ಷ ಡಾ. ಸಿ.ಆನಂದರಾವ್ ಒತ್ತಾಯಿಸಿದರು.

ಇಲ್ಲಿಯ ಭಾರತೀಯ ಕುಟುಂಬ ಯೋಜನಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಚಿತ ಲಸಿಕೆ ಕೊಡುವ ಸಂಬಂಧ ವೈದ್ಯಾಧಿಕಾರಿಗಳ ಸಂಘಗಳು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಹೇಳಿದರು.

ವೈದ್ಯರು ರೋಗಿಗಳನ್ನು ಉಪಚರಿಸುತ್ತಾರೆ. ಅವರ ಜೀವ ಉಳಿಸಲು ಪ್ರಯತ್ನಿಸುತ್ತಾರೆ. ಕಾರಣ, ವೈದ್ಯರನ್ನು ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

ADVERTISEMENT

ಸಂಘದ ಬೀದರ್ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ, ಗೌರವ ಖಜಾಂಟಿ ಡಾ.ವಿಜಯ ಕೊಂಡಾ, ಮಾಜಿ ಅಧ್ಯಕ್ಷೆ ಡಾ.ವಿಜಯಶ್ರೀ ಬಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾದ ಡಾ.ಎ.ಸಿ. ಲಲಿತಮ್ಮ ಮಾತನಾಡಿದರು.

ಡಾ.ಸುಭಾಷ ಬಶೆಟ್ಟಿ, ಸರ್ವಜ್ಞ ಕುಲಕರ್ಣಿ, ಡಾ.ಸಿ.ಎಸ್.ಮಾಲಿಪಾಟೀಲ, ಡಾ.ಎಂ.ಎಂ. ಶೇರಿಕಾರ್, ಡಾ.ವೈಜಿನಾಥ ಬಿರಾದಾರ, ಡಾ.ದಾಬಕೆ, ಡಾ.ರಾಜಶೇಖರ ಲಕ್ಕಶೆಟ್ಟಿ, ಡಾ.ಚಿನ್ನಮ್ಮ ಬಿರಾದಾರ ಇದ್ದರು.

ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಸ್ವಾಗತಿಸಿದರು. ನವ್ಯ ಕಿರೋನ್ ನಿರೂಪಿಸಿದರು. ವಿನಾಯಕ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.