ADVERTISEMENT

ಚಿಟಗುಪ್ಪ | 18 ಕೆ.ಜಿ ಬೆಳ್ಳಿ ಗಣಪತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:07 IST
Last Updated 30 ಆಗಸ್ಟ್ 2025, 7:07 IST
ಚಿಟಗುಪ್ಪ ಪಟ್ಟಣದಲ್ಲಿ ಬೃಹತ್ ಗಣೇಶ ಮೂರ್ತಿ ಜೊತೆಗೆ ಬೆಳ್ಳಿ ಗಣಪತಿ ಪ್ರತಿಷ್ಠಾಪನೆ ಮಾಡಿರುವುದು
ಚಿಟಗುಪ್ಪ ಪಟ್ಟಣದಲ್ಲಿ ಬೃಹತ್ ಗಣೇಶ ಮೂರ್ತಿ ಜೊತೆಗೆ ಬೆಳ್ಳಿ ಗಣಪತಿ ಪ್ರತಿಷ್ಠಾಪನೆ ಮಾಡಿರುವುದು   

ಚಿಟಗುಪ್ಪ (ಹುಮನಾಬಾದ್): ಪಟ್ಟಣದ ಗಾಂಧಿ ವೃತ್ತದಲ್ಲಿ ಜೈ ಹಿಂದ್‌ ಗಣೇಶ ತರುಣ ಸಂಘವು ಗಣೇಶ ಚತುರ್ಥಿ ಅಂಗವಾಗಿ ಬೃಹತ್ ಆಕಾರದ ಗಣೇಶ ಮೂರ್ತಿ ಜೊತೆಗೆ 2 ಅಡಿ ಎತ್ತರದ 18 ಕೆ.ಜಿ ತೂಕದ ಬೆಳ್ಳಿ ಗಣೇಶ ಮೂರ್ತಿಯನ್ನು ಸಹ ಪ್ರತಿಷ್ಠಾಪಿಸಿದೆ.

ಸಂಘದ ಪದಾಧಿಕಾರಿಗಳು 40 ವರ್ಷಗಳಿಂದ ಸಾರ್ವಜನಿಕ ಗಣೇಶ ಹಬ್ಬ ಆಚರಿಸುತ್ತಿದ್ದಾರೆ. ಐದು ದಿನಗಳ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಹಬ್ಬದ ಆಚರಣೆ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ ಹಾಗೂ ಪ್ರವಚನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT